ಕಿರಣ್ ಸಾವು ಗೊತ್ತಿಲ್ಲ: ಸಚಿವ ಜಯಚಂದ್ರ
ತಿಪಟೂರು: ಇತ್ತೀಚೆಗೆ ಪೊಲೀಸರ ದೌರ್ಜನ್ಯದಲ್ಲಿ ಅಸು ನೀಗಿದ್ದಾನೆ ಎನ್ನಲಾದ ಕಿರಣ್ ವಿಷಯ ತಮಗೆ ಗೊತ್ತೇ ಇಲ್ಲ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ರಜತಾದ್ರಿಪುರದ ನರಸಿಂಹಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ ದೇವರ ಪುನರ್ ಪ್ರತಿಷ್ಠಾಪನಾ ಸಮಾರಂಭ ನಂತರ ಮಾತನಾಡಿದರು. ಶಾಸಕರನ್ನು ಕೇಳಿಬಿಡುತ್ತೀನಿ ಎಂದು ಶಾಸಕ ಷಡಕ್ಷರಿಯವರನ್ನು ಕರೆದು ಏನಿದು ಎಂಬಂತೆ ಅವರ ಮುಖ ನೋಡಿದರು. ಪ್ರತಿಕ್ರಿಯಿಸಿದ ಶಾಸಕರು ರೈತನ ಸಾವಿನ ಬಗ್ಗೆ ಉನ್ನತ ತನಿಖೆ ನಡೆಯಲಿದೆ. ಪರಿಹಾರವನ್ನೂ ನೀಡಲಾಗುವುದು ಎಂದು ತಿಪ್ಪೆಸಾರಿಸುವ ಕೆಲಸ ಮಾಡಿದರು. ಸಂಸದ ಮುದ್ದಹನುಮೇಗೌಡರದ್ದು ಕೂಡಾ ಇದೇ ಸ್ಥಿತಿ ಇತ್ತು.
ಮೃತ ಕಿರಣ್ ಮನೆಗೆ ಯಾವುದೇ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಬಂದಿಲ್ಲ ಎಂದು ತಿಳಿಸಿದ್ದಾರೆ. ನಮ್ಮ ಮನೆಯ ಬದುಕೇ ಆತನ(ಕಿರಣ್) ದುಡಿಮೆಯಿಂದ ನಡೆಯುತ್ತಿತ್ತು. ಈಗ ಅವನನ್ನು ಪೋಲೀಸರು ಸಾಯಿಸಿದ್ದಾರೆ. ಈಗ ನಾವು ಬೀದಿಗೆ ಬಿದ್ದಂಗಾಗಿದೆ. ಇರುವ ಅರ್ಧ ಎಕರೆ ಭೂಮಿಯೇ ನಮಗೀಗ ಆಧಾರ ಎಂದು ತಮ್ಮ ಗೋಳು ತೋಡಿಕೊಂಡರು.