ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುಮಕೂರು ವಿವಿಗೆ ಚೀನಾ, ಅಮೆರಿಕ ವಿಜ್ಞಾನಿಗಳ ಭೇಟಿ

Mainashree
Updated On : 23 Jun 2014, 10:41 am

ತುಮಕೂರು; ಕೃಷಿ, ಆಹಾರ ಸಂಸ್ಕರಣೆ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನ ನಿರತ ಚೀನಾ ದೇಶದ ಹೆಯ್‌ಲಾಂಗ್ ಜಿಯಾಂಗ್ ಬೇಯಿ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಲಾಂಗ್ ಕುಯ್ ಕ್ಯಾವ್, ಪ್ರೊ. ಯೂಹು ಜುಯೊ, ಪ್ರೊ. ಡೈನ್ ಫೆಂಗ್ ಜೆಂಗ್, ಅಮೆರಿಕಾದ ಐಯೋವಾ ವಿಶ್ವವಿದ್ಯಾನಿಲಯದ ಸಹಾಯಕ ವಿಜ್ಞಾನಿಗಳಾದ ಪ್ರೊ. ಶ್ರೀಶೈಲ್ ಎಸ್ ನಾವಿ ಹಾಗೂ ಚೀನಾದ ಇನ್ನರ್ ಮಂಗೋಲಿಯಾ ಕೃಷಿ ವಿಶ್ವವಿದ್ಯಾನಿಲಯದ ಪ್ರೊ. ಲ್ಯಾನ್ ಜಿಂಗ್ ಅವರು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದರು.
ರಾಗಿ, ನವಣೆ, ಜೋಳ, ಆರಕ, ಸಜ್ಜೆ, ಸಾಮೆ ಮುಂತಾದ ಏಕದಳ ಧಾನ್ಯಗಳ ಸಂಶೋಧನೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಮೀಕ್ಷೆಗಾಗಿ ರಾಜ್ಯಕ್ಕೆ ಆಗಮಿಸಿರುವ ಚೀನಾ ಹಾಗೂ ಅಮೆರಿಕಾದ ವಿಜ್ಞಾನಿಗಳು ತುಮಕೂರು ವಿಶ್ವವಿದ್ಯಾನಿಲಯದ ಕೋರಿಕೆಯನ್ನು ಮನ್ನಿಸಿ ವಿಶ್ವವಿದ್ಯಾನಿಲಯದೊಂದಿಗೆ ಕೃಷಿ, ಆಹಾರ ಸಂಸ್ಕರಣೆ, ವಿಜ್ಞಾನ ಹಾಗೂ ಇತರೆ ಕ್ಷೇತ್ರಗಳಲ್ಲಿ ವಿಚಾರ ಸಂಕಿರಣ, ಕಾರ್ಯಾಗಾರಗಳ ಆಯೋಜನೆ, ಸಂಶೋಧನ ಸಹಭಾಗಿತ್ವ, ಫ್ಯಾಕಲ್ಟಿ ಎಕ್ಸಚೇಂಜ್‌ನ ಪ್ರೋಗ್ರಾಮ್ ಹಾಗೂ ಸ್ಟೂಡೆಂಟ್ ಎಕ್ಸ್‌ಚೇಂಜ್ ಪ್ರೋಗ್ರಾಮ್‌ಗಳಿಗೆ ಸಂಬಂಧಿಸಿದಂತೆ ಸಂಶೋಧನ  ಒಡಂಬಡಿಕೆಯ ಪೂರ್ವ ಸೌಹಾರ್ಧ ಭೇಟಿಯ ನಂತರ ವಿಶ್ವವಿದ್ಯಾನಿಲಯ ಬೋಧಕ ಸಿಬ್ಬಂದಿಯೊಂದಿಗೆ ಸಂಶೋಧನ ಸಂವಾದ ನಡೆಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎ.ಎಚ್. ರಾಜಾಸಾಬ್ ಆಗಮಿತ ವಿಜ್ಞಾನಿಗಳಿಗೆ ನೀಡಿದ ಪ್ರಾತ್ಯಕ್ಷಿಕೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಸಂಶೋಧನ ಕ್ಷೇತ್ರದಲ್ಲಿ ಸಾಧಿಸಿರುವ ಮೈಲಿಗಲ್ಲುಗಳು ಹಾಗೂ ಸಾಧಿಸಬೇಕಾದ ಸಂಶೋಧನ ಸಾಧ್ಯತೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ವಿಜ್ಞಾನಿಗಳೊಂದಿಗೆ ನಡೆದ ಶೈಕ್ಷಣಿಕ ಹಾಗೂ ಸಂಶೋಧನ ಸಂವಾದ ಕಾರ್ಯಕ್ರಮದಲ್ಲಿ ಕುಲಸಚಿವ. ಪ್ರೊ.ಡಿ. ಶಿವಲಿಂಗಯ್ಯನವರು, ಹಣಕಾಸು ಅಧಿಕಾರಿ ಬಿ.ಕೆ. ಸುರೇಶ್, ಸ್ನಾತಕೋತ್ತರ ಅಧ್ಯಯನ ವಿಭಾಗಗಳ ನಿರ್ದೇಶಕ ಡಾ.ಎಂ. ಜಯರಾಮು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement