ದುಶ್ಚಟಗಳಿಂದ ಮುಕ್ತರಾಗಿ: ಗವಿಮಠ ಶ್ರೀ
ಗುಬ್ಬಿ: ಮನುಷ್ಯ ಸಾಮಾಜಿಕ ಬದುಕಿನಲ್ಲಿ ಸುಸಂಸ್ಕೃತ ವ್ಯಕ್ತಿಯಾಗಿ ಬದುಕು ಸಾಗಿಸಬೇಕಾದರೆ ನಮ್ಮ ಬದುಕಿಗೆ ಮಾರಕವಾದ ದುಶ್ಚಟಗಳಿಂದ ಮುಕ್ತರಾದಾಗ ಮಾತ್ರ ಸಾಧ್ಯ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಮಾಹಾಸ್ವಾಮೀಜಿ ಕರೆ ನೀಡಿದರು.
ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ 697ನೇ ಮಧ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಅನೇಕ ತಜ್ಞರು ಮದ್ಯವನ್ನು ಬಿಡಿಸಬೇಕೆಂದು ಪ್ರಯತ್ನಪಟ್ಟರೂ ಆಗದಂಥ ಕೆಲಸವನ್ನು ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರು ಈ ಮಹತ್ತರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಮನುಷ್ಯ ಕುಡಿಯಲು ಕೆಲವು ಪ್ರಮುಖ ಕಾರಣಗಳಿರುತ್ತವೆ. ಅದರಲ್ಲಿ ಒಂದು ಕೌಟುಂಬಿಕ ಕಾರಣ. ಎರಡನೆಯದು ಸತಿ ಪತಿಗಳಲ್ಲಿ ಅಪನಂಬಿಕೆ ಬಂದಾಗ ಸ್ನೇಹಿತರ ಸಹವಾಸದಿಂದ ಕುಡಿಯುತ್ತಾರೆ ಎಂದರು.
ಸಮಿತಿ ಕಾರ್ಯದರ್ಶಿ ಮಹಾವೀರ ಜೈನ ಮಾತನಾಡಿ, ನಾವು ಚೆನ್ನಾಗಿ ಬದುಕಬೇಕು. ಎಲ್ಲರನ್ನೂ ನಮ್ಮಂತೆ ಬದುಕಲು ನಾವು ಬಿಡಬೇಕು. ಸಮಾಜದಲ್ಲಿ ಉತ್ತಮ ಕೆಲಸ ಮಾಡಿದಾಗ ಮಾತ್ರ ಜನರಲ್ಲಿ ನಂಬಿಕೆ ಬರುತ್ತದೆ ಎಂದರು.
ಸಮಿತಿಯ ಗೌರವಾಧ್ಯಕ್ಷರಾದ ಎನ್.ಸಿ.ನಂಜಪ್ಪ, ಜಿಲ್ಲಾ ಯೋಜನಾಧಿಕಾರಿ ಗಂಗಾಧರ ರೈ, ಮಾತನಾಡಿದರು. ಯೋಜನಾಧಿಕಾರಿ ತಿಮ್ಮಾನಾಯಕ. ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಆರೋಗ್ಯ ಸಹಾಯಕಿ ಫಿಲೋಮಿನ, ಪ್ರಧಾನ ಸಂಚಾಲಕ ಪ್ರವೀಣಕುಮಾರ್ ಗುಬ್ಬಿ, ಕಾರ್ಯದರ್ಶಿ ವಸಂತ ಕುಮಾರ್, ಕಾರ್ಯಕಾರಿ ಸಮಿತಿ ಶಿವಕುಮಾರ್, ಕೋಶಾಧಿಕಾರಿ ಎನ್.ಎಸ್. ಪ್ರಸನ್ನ, ವೇಣುಗೋಪಾಲ್. ವಿಶ್ವನಾಥಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಸಿ.ಗಿರೀಶ್, ಭಾಗ್ಯಮ್ಮ. ರಾಜೇಶ್ವರಿ, ಭಾಗ್ಯ, ರಾಜಶೇಖರ್. ಅನ್ನಪೂರ್ಣ ಹಾಗೂ ಇತರರು ಇದ್ದರು.