ವಿಚಾರಗಳ ಬೆನ್ನತ್ತಿದಾಗ ಹೊಸ ಸಾಧನೆ ಸಾಧ್ಯ
ತುಮಕೂರು: ಮನುಷ್ಯ ವಿಚಾರಗಳ ಬೆನ್ನತ್ತಿ ಹೋದಾಗ ಮಾತ್ರ ಹೊಸದನ್ನು ಸಾಧಿಸಲು ಸಾಧ್ಯ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು. ಭಾಸ್ಕರಾಚಾರ್ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮಂಜುನಾಥ ಕಲಾ ಸಂಘ ಹೆಗ್ಗೋಡಿನ ಜನಮನದಾಟ ಕಲಾತಂಡ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಮುಕುಂದರಾವ್ ರಚಿಸಿರುವ ಬಾಬಾ ಸಾಹೇಬ್ ಅಂಬೇಡ್ಕರ್ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿಚಾರಗಳ ಬೆನ್ನ ಹತ್ತಿದ್ದರ ಫಲವಾಗಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಭಾರತದಂತಹ ಉಪಖಂಡಕ್ಕೆ ಸಂವಿಧಾನ ನೀಡಲು ಸಾಧ್ಯವಾಯಿತು ಎಂದರು.
ಭೂಮಿ ಬಳಗದ ಅಧ್ಯಕ್ಷ ಜಿ.ಎಸ್. ಸೋಮಣ್ಣ ಮಾತನಾಡಿ, ಅಂಬೇಡ್ಕರ್ ಬಗ್ಗೆ ಬಹಳಷ್ಟು ಜನ ತಪ್ಪು ತಿಳಿದುಕೊಂಡಿದ್ದಾರೆ. ಅವರು ದಲಿತರು, ಬಡವರನಷ್ಟೇ ಪ್ರೇವಿಸುತ್ತಿರಲಿಲ್ಲ. ಅಪರಿಮಿತ ದೇಶಪ್ರೇಮಿಯೂ ಆಗಿದ್ದರು ಎಂಬುದು ಅವರ ಹಲವು ಲೇಖನಗಳು, ಪುಸ್ತಕಗಳು ತೋರಿಸಿಕೊಟ್ಟಿವೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ನಾಟಕದ ರಚನೆಕಾರ ಮುಕುಂದರಾವ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಲಾಶ್ರಿ ಡಾ. ಲಕ್ಷ್ಮಣ್ ದಾಸ್ ಮಾತನಾಡಿದರು. ಹಿರಿಯ ರಂಗಕಲಾವಿದ ಸೋ.ಮು. ನಾಗರಾಜಾಚಾರ್, ಶ್ರೀಮಂಜುನಾಥ ಕಲಾಸಂಘದ ಅಧ್ಯಕ್ಷ ಯೋಗಾನಂದ, ವಂಸತ ಇದ್ದರು.