ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜವಾಬ್ದಾರಿ ಮರೆತ ವಿಶೇಷ ಸಭೆ

Vishwanath S
Updated On : 28 Jun 2014, 12:17 pm

ಚಿಕ್ಕನಾಯಕನಹಳ್ಳಿ: ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆದಿದ್ದ ಪ್ರಥಮ ಸಭೆಯಲ್ಲಿ ಬಿಗಡಾಯಿಸಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಂಭೀರವಾದ ಚರ್ಚೆ ನಡೆಯದೆ ಸಭೆಯ ಉದ್ದೇಶವೇ ವಿಫಲವಾಗಿದ್ದು ಪಟ್ಟಣದ ಜನತೆಯ ದೌರ್ಭಾಗ್ಯವಾಗಿದೆ.
ಪುರಸಭೆಯ 23 ವಾರ್ಡ್‌ಗಳಲ್ಲಿಯು ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಪ್ರಸ್ತುತ 10 ರಿಂದ 12 ದಿನಗಳಿಗೊಮ್ಮೆ ನೀರು ಬಿಡುವ ಪರಿಸ್ಥಿತಿ ಉದ್ಬವಿಸಿದೆ. ಜೂನ್ ತಿಂಗಳು ಕಳೆದರು ಮಳೆ ಬಾರದ ಪರಿಣಾಮ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿಗಳು ಬತ್ತಿಹೋಗಿವೆ. ಎಸ್‌ಎಫ್‌ಸಿ ಅನುದಾನದಲ್ಲಿ ಕೊರೆದಿರುವ 10 ಕೊಳವೆ ಬಾವಿಗಳ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ ಮುಂತಾದ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯವಿದೆ ಎಂದು ಸದಸ್ಯ ಖಲಂದರ್ ಒತ್ತಾಯಿಸಿದರು.
ಇದನ್ನು ವಿರೋಧಿಸಿದ ಸದಸ್ಯ ದಯಾನಂದ್, ಸಮಯ ಹಾಳುಮಾಡವುದನ್ನು ಬಿಟ್ಟು ಬೇರೆ ವಿಷಯ ಚರ್ಚೆ ಮಾಡಿ ಎಂದು ಖಲಂದರ್ ಬಾಯಿ ಮುಚ್ಚಿಸಿದರು. ಮಧ್ಯೆ ಪ್ರವೇಶಿಸಿದ ಮಾಜಿ ಅಧ್ಯಕ್ಷ ಸಿ.ಎಸ್. ರಮೇಶ್, ಕಂಠ ಶೋಷಣೆಯಿಂದ ಅವ್ಯಹಾರ ನಿಲ್ಲಿಸಲು ಸಾಧ್ಯವಿಲ್ಲ ಎಂದರು. ಅಂತಿಮವಾಗಿ ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯಲು ವಿಫಲವಾದ ಸಭೆ ತಾತ್ಕಾಲಿಕವಾಗಿ 5 ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ನೀರು ಸರಬರಾಜು ಮಾಡಲು ತೀರ್ಮಾನಿಸಿತು.
ಕಂದಾಯ ವಸೂಲಿಗೆ ಆದೇಶ: ಮುಖ್ಯಾಧಿಕಾರಿ ಟಿ.ಆರ್. ವೆಂಕಟೇಶಶೆಟ್ಟಿ ಮಾತನಾಡಿ, ಈವರೆಗೂ ಖಾಲಿ ನಿವೇಶನಗಳಿಗೆ ಕಂದಾಯ ವಸೂಲಿಗೆ ಅವಕಾಶವಿರಲಿಲ್ಲ. ಆದರೆ ಈಗ ಸರ್ಕಾರ ಖಾಲಿ ನಿವೇಶನಗಳಿಗೂ ಕಂದಾಯ ವಸೂಲಿಗೆ ಆದೇಶ ಹೊರಡಿಸಿದೆ. ಅದರಂತೆ ನೋಂದಣಾಧಿಕಾರಿಗಳ ಕಚೇರಿ ಮೌಲ್ಯದ ಆಧಾರದ ಮೇಲೆ ಶೇ.15ರಿಂದ ಶೇ.30ರವರಗೆ ಕಂದಾಯ ನಿಗದಿ ಮಾಡಬಹುದಾಗಿರುತ್ತದೆ ಎಂದರು.
ಸದಸ್ಯ ಸಿ.ಪಿ. ಮಹೇಶ್ ಮಾತನಾಡಿ, ವಾಜಪೇಯಿ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸರಿಯಾಗಿ ಹಣ ಬಿಡುಗಡೆಯಾಗಿಲ್ಲ. ಇದಕ್ಕೆ ಪುರಸಭೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಗಳು ಜಿಪಿಎಸ್ ಸಿಸ್ಟಮ್ ಬಂದಮೇಲೆ, ನಿವೇಶನ ಭಾವಚಿತ್ರದಿಂದ ಹಿಡಿದು, ಮನೆ ನಿಮಾಮ ಪೂರ್ಣಗೊಳ್ಳುವವರೆಗೆ ಉಪಗ್ರಹಾಧಾರಿತ ಫೋಟೋ ವ್ಯವಸ್ಥೆಯಿರುವುದರಿಂದ ಫಲಾನುಭವಿಗಳು ಮಾಡಿಕೊಳ್ಳುವ ಕೆಲಸದ ಆಧಾರದ ಮೇಲೆ ಹಣ ಬಿಡುಗೆಯಾಗಿದೆ. ಇದರಲ್ಲಿ ಪುರಸಭೆಯ ತಪ್ಪಿಲ್ಲ ಎಂದರು. ಸಭೆಯಲ್ಲಿ ಸದಸ್ಯರಾದ ಸಿ.ಎಂ. ರಂಗಸ್ವಾಮಿ, ಎಚ್.ಬಿ.ಪ್ರಕಾಶ್, ಮಲ್ಲೇಶಯ್ಯ, ಉಪಾಧ್ಯಕ್ಷೆ ನೇತ್ರಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement