ಕನ್ನಡ ಚಿತ್ರರಂಗ ಉಳಿಸಿ ಬೆಳೆಸಿ: ದರ್ಶನ್
ಕುಣಿಗಲ್: ಕನ್ನಡಿಗರು ಸದಾ ಕನ್ನಡ ಚಲಚಿತ್ರಗಳನ್ನು ನೋಡುವ ಮೂಲಕ ಕನ್ನಡ ಚಿತ್ರರಂಗ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಮೂಲ್ಯ ಕೊಡುಗೆ ನೀಡಬೇಕೆಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದರು.
ಶುಕ್ರವಾರ ಸಂಜೆ ಪಟ್ಟಣದ ಸಂತೇಮೈದಾನದಲ್ಲಿ ಡಾ.ಅಂಬರೀಷ್ ಅಭಿಮಾನಿಗಳ ಜಿಲ್ಲಾ ಸಂಘ ಹಮ್ಮಿಕೊಂಡಿದ್ದ ನರ್ತನ ಪುರಿ ಕನ್ನಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುದುರೆಗಳಿಗೆ ಕುಣಿಗಲ್ ತುಂಬಾ ಖ್ಯಾತಿ. ಇಂತಹ ಪಟ್ಟಣದಲ್ಲಿ ಕನ್ನಡ ಅಭಿಮಾನಿಗಳಿಗೆ ಕೊರತೆ ಇಲ್ಲ. ಮಂಡ್ಯ ಜಿಲ್ಲೆಯ ಜನರಿಗೆ ಸರಿಸಾಟಿಯಾಗಿ ನಾಡು, ನುಡಿಯ ಸಂರಕ್ಷಣೆ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿದ್ದಾರೆ. ಇದೇ ರೀತಿಯಾಗಿ ಕನ್ನಡ ಚಿತ್ರೋದ್ಯಮ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಹಕಾರ ನೀಡಿ ಕಲಾವಿದರ ಏಳಿಗೆಗೆ ಸಹಕರಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ನಾಗರಾಜಯ್ಯ, ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘ, ಸಂಸ್ಥ್ಥೆಗಳು ಆಯೋಜನೆ ಮಾಡುವ ಮೂಲಕ ಜನತೆಗೆ ಸಾಂಸ್ಕೃತಿ ಚಟುವಟುಕೆಗಳ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಮಾಡುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ವಿಭಿನ್ನ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದರು.
ಜಿಪಂ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ತಾಪಂ ಅಧ್ಯಕ್ಷ ಜಗದೀಶ್, ಪುರಸಭೆ ಅಧ್ಯಕ್ಷ ಕೆ.ಎಲ್.ಹರೀಶ್, ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ನಾಗೇಶ, ತಾಲೂಕಾಧ್ಯಕ್ಷ ವೆಂಕಟೇಶ್, ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್, ಪ್ರಮುಖರಾದ ರಾಜೇಶ್, ಲಕ್ಷ್ಮೀನಾರಾಯಣ, ಅನ್ನದಾನಿ, ಗಿರೀಶ್, ನಾಗರಾಜು, ಪರಮೇಶ್, ಸುರೇಶ್, ಶಿವಣ್ಣ ಸೇರಿದಂತೆ ಇತರರು ಇದ್ದರು. ನಟ ದರ್ಶನ್ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು.