ಪಹಣಿ ತಿದ್ದುಪಡಿಗೆ ಅಗತ್ಯ ಕ್ರಮ: ಸತ್ಯಮೂರ್ತಿ
ಹುಳಿಯಾರು: ಈ ಹಿಂದೆ ಪಹಣಿ ಸೇರಿದಂತೆ ಇತರ ದಾಖಲೆಗಳನ್ನು ಕೈಬರಹದಲ್ಲಿ ನೀಡಲಾಗುತ್ತಿತ್ತು. ಆಗ ಸಾಕಷ್ಟು ತಪ್ಪಾಗಿವೆ ಹಾಗೂ ಕಂಪ್ಯೂಟರ್ಗೆ ಪಹಣಿಗಳನ್ನು ಎಂಟ್ರಿ ಮಾಡುವಾಗಲೂ ಕೆಲವು ದೋಷಗಳಾಗಿವೆ. ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪಹಣಿ ತಿದ್ದುಪಡಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ತಿಳಿಸಿದರು.
ಹುಳಿಯಾರು ಸಮೀಪದ ಹಂದನಕೆರೆಯಲ್ಲಿ ಶನಿವಾರ ನಡೆದ ಪಹಣಿ ತಿದ್ದುಪಡಿ ಆಂದೋಲನ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಆಸ್ತಿ ದಾಖಲೆ ಸೇರಿದಂತೆ ಇತರೆ ದಾಖಲೆಗಳಲ್ಲಿನ ದೋಷಗಳಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ತೊಂದರೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿನ ಎಲ್ಲಾ ದಾಖಲೆಗಳು ಕಂಪ್ಯೂಟರೀಕರಣ ಮಾಡಿದ್ದು ಇನ್ನು ಮುಂದೆ ಯಾವುದೇ ಕಾರಣಕ್ಕೂ ಜಮೀನು ದಾಖಲೆ ಪತ್ರಗಳಲ್ಲಿ ವ್ಯತ್ಯಾಸಗಳು ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.