ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೊಳವೆ ಬಾವಿ ಲೆಕ್ಕವಿಡಿ: ನಾಗರಾಜಯ್ಯ

Mainashree
Updated On : 30 Jun 2014, 12:46 pm

ಕುಣಿಗಲ್: ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಇರುವ ಕೊಳವೆಬಾವಿ, ಅವುಗಳಲ್ಲಿ ಅಳವಡಿಸಲಾಗಿರುವ ಪೈಪ್, ಮೋಟಾರ್‌ಗಳ ಸಮರ್ಪಕ ಲೆಕ್ಕಪತ್ರ ಇಡದ ಕಾರಣ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇಂತಹ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಿ ಸಮರ್ಪಕ ಲೆಕ್ಕಪತ್ರ ಇಡಲು ಕ್ರಮಕೈಗೊಳ್ಳಬೇಕೆಂದು ಇಒಗೆ ಶಾಸಕ ಡಿ.ನಾಗರಾಜಯ್ಯ ತಾಕೀತು ಮಾಡಿದರು.
ಶನಿವಾರ ಮಧ್ಯಾಹ್ನ ತಾಪಂ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಅಭಾವ ಪರಿಹಾರ ಸಭೆಯಲ್ಲಿ ಮಾತನಾಡಿ, ಮಾರ್ಕೋನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 11 ಮೋಟಾರ್‌ಗಳ ಪೈಕಿ ಕೇವಲ ಮೂರರ ಲೆಕ್ಕ ಸಿಗುತ್ತಿದೆ. ಉಳಿದ ಎಂಟು ಏನಾಗಿದೆ ಎಂಬ ಲೆಕ್ಕವಿಲ್ಲ. ಇನ್ನು ಮಡಿಕೆಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಕೊಳವೆ ಬಾವಿ ಕೊರೆಸಿದ್ದು ಒಳ್ಳೆಯ ನೀರಿದೆ. ಆದರೆ ಅದನ್ನು ಕೊರೆಸಿದ್ದಕ್ಕೆ ಸಂಬಂಧಿಸಿದಂತೆ ದಾಖಲೆ ಇಲ್ಲ. ಈಗ ನೀರು ಪಡೆಯಲು ಪೈಪ್, ಮೋಟಾರ್ ಅಳವಡಿಸಿದಲ್ಲಿ ಖಾಸಗಿ ವ್ಯಕ್ತಿಗಳು ನಮ್ಮದೆಂದು ಪಡೆಯುತ್ತಾರೆ. ಈಗಾಗಲೆ ಇದೇ ತರಹದ ಸಮಸ್ಯೆ ಜಿನ್ನಾಗರೆ ಗ್ರಾಪಂ ವ್ಯಾಪ್ತಿಯಲ್ಲಿ ಆಗಿದೆ. ಈ ಬಗ್ಗೆ ಸೂಕ್ತ ಲೆಕ್ಕವಿಡಿ ಎಂದು ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement