ಬಿದರಹೊಸಹಳ್ಳಿ ಗ್ರಾಮದ ಮಾರಮ್ಮ ದೇಗುಲ ದುರಸ್ತಿ
ಭಾರತೀನಗರ: ಮುರಿದು ಬೀಳುವ ಸ್ಥಿತಿಯಲ್ಲಿದ್ದ 150 ವರ್ಷಗಳ ಇತಿಹಾಸ ಹೊಂದಿರುವ ಮಾರಮ್ಮ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡುವುದರೊಂದಿಗೆ ಬಿದರಹೊಸಹಳ್ಳಿ ಗ್ರಾಮಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಒಗ್ಗಟ್ಟಿನಿಂದ ಮುಂದಾದ ಗ್ರಾಮಸ್ಥರು ಇತರೆ ಗ್ರಾಮಕ್ಕೆ ಮಾದರಿಯಾಗಿದ್ದಾರೆ.
ಸಮುದಾಯ ಭವನ, ಹಾಲಿನಡೇರಿ, ಕೃಷಿ ಪತ್ತಿನ ಸಹಕಾರ ಸಂಘ, ಸ್ತ್ರೀ ಶಕ್ತಿಸಂಘ, ಯುವಕರ ಸಂಘ ಇವರ ಸಹಕಾರದಲ್ಲಿ ನಾಡಗೌಡರು, ಯುವಕರು, ಮಹಿಳೆಯರು ಹಾಗೂ ಗ್ರಾಮಸ್ಥರೆಲ್ಲರೂ ಧನಸಹಾಯ ಮಾಡುವುದರ ಜೊತೆಗೆ ಚುನಾಯಿತ ಜನಪ್ರತಿನಿಧಿಗಳಿಂದ ಧೇಣಿಗೆ ಸಂಗ್ರಹಿಸಿ 2 ವರ್ಷದ ಅವಧಿಯಲ್ಲಿ ರು. 21 ಲಕ್ಷ ವೆಚ್ಚದ ಸುಂದರ ಮಾರಮ್ಮ ದೇವಸ್ಥಾನ ನಿರ್ಮಿಸಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಉದ್ಘಾಟನೆ ಮಾಡಿ ಜನತೆಯ ಶ್ರಮಕ್ಕೆ ಯಶಸ್ಸು ಸಿಕ್ಕಿದಂತಾಯಿತು. ದೇವಸ್ಥಾನ ಖಾಲಿ ನಿವೇಶನದಲ್ಲಿ ಪಾರ್ಕ್ಅನ್ನು ನಿರ್ಮಿಸಲಾಗಿದೆ. ದಿ.ಬಾಲಗಂಗಾಧರನಾಥಸ್ವಾಮೀಜಿ ಸಮಾಧಿಯನ್ನು ಗ್ರಾನೈಟ್ನಿಂದ ನಿರ್ಮಿಸಿ ಬೆಳಕು ವ್ಯವಸ್ಥೆ ಮಾಡಲಾಗಿದೆ.