ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಖಾತ್ರಿ ಮಾಹಿತಿ ಪಡೆಯಲು ಜಿಪಂಗೆ ಆಗಮಿಸಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ

Rashmi Kasaragodu
Updated On : 2 Mar 2014, 1:20 am


ಪಾವಗಡ: ಯೋಜನೆಯ ಮಾಹಿತಿ ಪಡೆಯಲು ಜಿಪಂಗೆ ಆಗಮಿಸಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು  ಜಿಪಂ ಎಇಇ ಅಶೋಕರೆಡ್ಡಿ ಎದುರೆ ಹಿಗ್ಗಾ ಮುಗ್ಗಾ ಥಳಿಸಿ ಅವಮಾನ ಪಡಿಸಿದ ಘಟನೆ ಶನಿವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯಿತು.
 ಸಾರ್ವಜನಿಕರ ಥಳಿತಕ್ಕೆ ಒಳಗಾಗಿ ಅವಮಾನ ಪಟ್ಟ ವ್ಯಕ್ತಿ ತಾ. ಸಾರವಾಟಪುರ ನಾಗರಾಜ್ ಎಂಬುವರು.
2010-11ನೇ ಸಾಲಿಗೆ ತಾಲೂಕಿನಾದ್ಯಂತ ಸುಮಾರು 20ಕೋಟಿ ವೆಚ್ಚದ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ನಿರ್ವಹಣೆ ಕುರಿತು   ವಕೀಲ ಸಾರವಾಟಪುರ ನಾಗರಾಜ್ ಎಂಬುವವರು ಕಾಮಗಾರಿಗಳು ಬಹುತೇಕ ಕಳಪೆಯಿಂದ ಕೂಡಿವೆ ಎಂದು ಆರೋಪಿಸಿ ಮಾಹಿತಿ ಹಕ್ಕಿನಲ್ಲಿ ವಿವರ ಪಡೆದು ಲೋಕಾಯುಕ್ತರ ತನಿಖೆಗೆ ದೂರು ಸಲ್ಲಿಸಿದ್ದರು.
ಲೋಕಾಯುಕ್ತರ ಆದೇಶದಂತೆ ನಿರ್ವಹಣೆ ಮಾಡಿದ ಕಾಮಗಾರಿಗಳ ಹಣ ಬಿಡುಗಡೆಗೆ ತಡೆಹಿಡಿದಿದ್ದ ಜಿಪಂ ಸಿಇಒ ಕಾಮಗಾರಿಗಳ ಗುಣಮಟ್ಟ ಹಾಗೂ ಯೋಜನೆಯ ನಿಖರ ಮಾಹಿತಿ ಪಡೆಯಲು 3ನೇ ವ್ಯಕ್ತಿ ತಪಾಸಣೆಗೆ ಒಳಪಡಿಸಿದ್ದರು. ಕಾಮಗಾರಿಗಳ ತಪಾಸಣೆ ನಡೆಯುತ್ತಿದ್ದ ಕಾರಣ ಕಳೆದ 2 ವರ್ಷಗಳಿಂದ ಈ ಯೋಜನೆಯ ಹಣ ಬಿಡುಗಡೆಗೆ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಬೇಸತ್ತ ಕೆಲವರು ಹಣ ಬಿಡುಗಡೆಯ ವಿಳಂಬಕ್ಕೆ ಸಾರವಾಟಪುರ ನಾಗರಾಜ್ ಅವರೇ ನೇರ ಕಾರಣವೆಂದು ನಂಬಿದ್ದರು. ಅವರನ್ನು  ಕಾಯುತ್ತಿದ್ದರು.
ಬೆಳಿಗ್ಗೆ ಜಿಪಂ ಯೋಜನೆಯ ಕೆಲ ಮಾಹಿತಿ ಪಡೆಯಲು ಜಿಪಂಗೆ ನಾಗರಾಜ್ ಆಗಮಿಸಿದ್ದರು. ಆಗಮನದ ಮಾಹಿತಿ ಪಡೆದ ಸಾರ್ವಜನಿಕರು ಜಿಪಂಗೆ ಆಗಮಿಸಿ ಕುಳಿತಿದ್ದ ನಾಗರಾಜ್ ಅವರನ್ನು ಹಿಡಿದು ಕೊಠಡಿಯೊಂದಕ್ಕೆ ಕರೆದ್ಯೊಯ್ದ ಜಿಪಂ ಎಇಇ ಅಶೋಕರೆಡ್ಡಿ ಸಮ್ಮಖದಲ್ಲಿಯೇ  ನಾಗರಾಜ್ ಅವರನ್ನು ಥಳಿಸಿದರು.
ಜಿಪಂಗೆ ಜಮಾಯಿಸಿದ್ದ ನೂರಾರು ಮಂದಿ ಸಾರ್ವಜನಿಕರು  ಹಿಗ್ಗಾ ಮುಗ್ಗಾ ಥಳಿಸಿ ಅವಾಶ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಆತನ ಸಹಾಯಕ್ಕೆ ಬಂದ ಮುಖಂಡ ಹನುಮಂತಪ್ಪ ಎಂಬುವರಿಗೂ ಥಳಿಸಿ ಅವಮಾನಪಡಿಸಿದ ಪ್ರಸಂಗ ನಡೆಯಿತು.
ಇದೇ ಸಂದರ್ಭದಲ್ಲಿ ಖಾತ್ರಿ ಯೋಜನೆ ಕೂಲಿಕಾರರ ಅಧ್ಯಕ್ಷ ಪ್ರಕಾಶ್ ರೆಡ್ಡಿ ಮಾತನಾಡಿ ತಾಲೂಕಿನ 33 ಗ್ರಾಪಂಗಳ ಮಾಹಿತಿ ಪಡೆದು ಲೋಕಾಯುಕ್ತರಿಗೆ ದೂರು ನೀಡಿದ ಪರಿಣಾಮ ಇದುವರೆವಿಗೂ 2010-11ನೇ ಸಾಲಿನ ಖಾತ್ರಿ ಯೋಜನೆ ಕಾಮಗಾರಿಗಳ ಕೋಟ್ಯಂತರ ರು.ಗಳ ಹಣ ಪಾವತಿಯಾಗಿಲ್ಲ. ಮಾಹಿತಿ ಹಕ್ಕಿನ ಹೆಸರಿನಲ್ಲಿ ನಾಗರಾಜ್  ಬ್ಲಾಕ್ ಮೆಲ್ ದಂಧೆಯಲ್ಲಿ ನಿರತರಾಗಿದ್ದಾರೆಂದು ಆರೋಪಿಸಿದರು.
ಘಟನೆ ಹಿನ್ನಲೆಯಲ್ಲಿ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸಿಪಿಐ ಭಾನುಪ್ರಕಾಶ್ ಹಾಗೂ ಕ್ರೈಂ ಪಿಎಸ್‌ಐ ನಟರಾಜ್ ಗಲಾಟೆಯನ್ನು ತಹಬಂದಿಗೆ ತಂದರು. ಥಳಿತಕ್ಕೆ ಒಳಗಾದ ನಾಗರಾಜ್ ಅವರನ್ನು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement