ಜ್ಯೋತಿ ಬಸು ಜನ್ಮಶತಮಾನೋತ್ಸವ
ತುಮಕೂರು: ತುಮಕೂರು ಸಮೀಪದ ದೇವರಾಯನದುರ್ಗದ ವೈಷ್ಣವಿ ಸಭಾ ಭವನದಲ್ಲಿ ಸಿಪಿಎಂ ವತಿಯಿಂದ ಜ್ಯೋತಿ ಬಸು ಅವರ ಜನ್ಮಶತಮಾನೋತ್ಸವ ಅಂಗವಾಗಿ 2 ದಿನಗಳ ಅಧ್ಯಯನ ಶಿಬಿರ ಆಯೋಜಿಸಲಾಗಿತ್ತು. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಂದ ಸ್ವಾಮಿ ಅವರು ಆರ್ಥಿಕ, ಸಮಾಜಿಕ ಅಸಮಾನತೆ, ಬಡತನ, ಶೋಷಣೆ ನಿರುದ್ಯೋಗದಿಂದ ಬಳಲಿ ಬೆಂಡಾಗಿರುವ ಸಾಮಾಜಿಕ ವ್ಯವಸ್ಥೆಯನ್ನು ಆರೋಗ್ಯಕರ ಸಮಾಜವಾಗಿಸಲು ಸಮಾಜವಾದದಿಂದ ಮಾತ್ರ ಸಾಧ್ಯ ಎಂದರು. ಹಾಗಾಗಿ ಕಮ್ಯುನಿಸಂ ಇಂದಿಗೂ ಪ್ರಸ್ತುತವೆಂದು ಎಂದರು. ಈ ಸಮಾಜದ ಶೋಷಕರ ಪರವಾಗಿ ಕೆಂಪುಭಾವುಟ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಶೋಷಣೆಮುಕ್ತ ಸಮಾಜ ಬರುವತನಕ ಕಮ್ಯೂನಿಸ್ಟ್‌ರ ಹೋರಾಟ ನಿಲ್ಲದು ಎಂದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ವಹಿಸಿದ್ದರು.