ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು ನಿಜ

Rashmi Kasaragodu
Updated On : 2 Mar 2014, 1:20 am

ಪಾವಗಡ: ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ತಾ.ಬೂದಿಬೆಟ್ಟ ಗ್ರಾಪಂ ವಿಭಾಗದ ಕಾಮಗಾರಿ ಮಾತ್ರ ತನಿಖೆ ನಡೆಸಿ ಎಂದು  ಲೋಕಾಯುಕ್ತರಿಗೆ ದೂರು ಸಲ್ಲಿಸಿರುವುದಾಗಿ ಸಾರವಾಟಪುರ ನಾಗರಾಜ್ ಅವರು ಸ್ವಷ್ಟಪಡಿಸಿದರು. ಖಾತ್ರಿ ಯೋಜನೆಯ ಹಣ ತಡೆಹಿಡಿದಿರುವ ಸಾರ್ವಜನಿಕ ಆರೋಪದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2010-11ನೇ ಸಾಲಿನ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನನ್ವಯ ತಾಪಂನಿಂದ ಮಾಹಿತಿ ಪಡೆದಿದ್ದು ಬೂದಿಬೆಟ್ಟ ಗ್ರಾಪಂನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿರುವದಾಗಿ ಅವರು ತಿಳಿಸಿದರು. ತಾಲೂಕಿನ ಅಭಿವೃದ್ಧಿ ಬಗ್ಗೆ ಕಾಳಜಿಯಿದ್ದು ನಾನು ತಾಲೂಕಿನಾದ್ಯಂತ ಖಾತ್ರಿ ಯೋ ನೆ  ಕಾಮಗಾರಿಗಳು ತನಿಖೆ ಮಾಡಿ ಎಂದು ಯಾವ ಅಧಿಕಾರಿಗಳಿಗೂ ದೂರು ಸಲ್ಲಿಸಿಲ್ಲ, ಬೇಕಾದರೆ ದಾಖಲೆಗಳು ಪರಿಶೀಲಿಸಿ ನೋಡಿ ಎಂದು ತಿಳಿಸಿದರು.  ಅಧಿಕಾರಿಗಳಿಗೆ ಯಾವುದೇ ತಪ್ಪು ದಾಖಲೆ ನೀಡಿಲ್ಲವೆಂದು ಅವರು ಸ್ಪಷ್ಟ ಪಡಿಸಿದರು.

'ಸಮಾಜದ ಏಳಿಗೆಗಾಗಿ ಪ್ರಯತ್ನ ಮಾಡಲಿ'

ತುಮಕೂರು: ಸಮಾಜದ ಏಳಿಗೆಗಾಗಿ ಸ್ಥಳಿಯರು ಸಂಘಟಿತ ಪ್ರಯತ್ನಗಳನ್ನು ಮಾಡಬೇಕು ಎಂದು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಕರೆ ನೀಡಿದ್ದಾರೆ.
ಶಿರಾ ತಾಲೂಕಿನ ಬರಗೂರಿನಲ್ಲಿ ವೀರಮ್ಮಾಜಿ ದೇವಿಯ ಜಾತ್ರ ಉತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭ ಉಧ್ಘಾಟಿಸಿ ಅವರು ಮಾತನಾಡಿದರು. ವೀರಮ್ಮಾಜಿ ದೇವಸ್ಥಾನದ ಟ್ರಸ್ಟ್ ಹೆಸರಿನಲ್ಲಿ ಸ್ಥಳಿಯರು ಮತ್ತು ಭಕ್ತರು ಸಂಘಟಿತವಾಗಿ ದೇವಿಯ ಉತ್ಸವದ ವೇಳೆ ಪ್ರತಿ ವರ್ಷ ಸಾಮೂಹಿಕ ವಿವಾಹ ಆಯೋಜಿಸುವದು ಮತ್ತು ಇತರೆ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವದು ಪ್ರಶಂಸಾರ್ಹವಾಗಿದೆ ಎಂದರು. ಸ್ಥಳಿಯ ಯುವಕರು ಹಾಗು ದೇವಸ್ಥಾನದ ಭಕ್ತರು ಸಂಘಟಿತವಾಗಿ ಸಮುದಾಯ ಭವನ ನಿರ್ಮಿಸಲು ಯೋಜನೆ ರೂಪಿಸಿರುವುದು, ಹಾಗು ದಾನಿಗಳಿಂದ ಹಣ ಸಂಗ್ರಹಿಸಿ ಭೂಮಿ ಖರೀದಿಸಿರುವದು ಉತ್ತಮ ಬಿಳವಣಿಗೆಯಾಗಿದೆ.
ಸಮಾರಂಭದಲ್ಲಿ ನಾಲ್ಕು ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿರಿಸಿದರು. ಉದ್ಯಮಿ ಬಾಣಗೆರೆ ರಾಮಕೃಷ್ಣಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ದೊಡ್ಡಲಿಂಗಪ್ಪ, ಸುರೇಶ್, ರಮೇಶ್, ಸಣ್ಣೀರಪ್ಪ ಮಹಲಿಂಗಪ್ಪ, ಕಾಂತರಾಜು ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement