ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಂಗಭೂಮಿ ಜೀವನ ಪ್ರೀತಿ ಕಲಿಸುತ್ತೆ: ಲಕ್ಷ್ಮಣದಾಸ್

Mainashree
Updated On : 2 Mar 2014, 10:37 am

ಕನ್ನಡಪ್ರಭ ವಾರ್ತೆ  ತುಮಕೂರು  ಮಾ.2
ರಂಗಭೂಮಿ ಮಾನವೀಯತೆ ಹಾಗೂ ಜೀವನ ಪ್ರೀತಿಯನ್ನು ಕಲಿಸುತ್ತದೆ ಎಂದು ಹರಿಕಥಾ ವಿದ್ವಾನ್ ಡಾ. ಲಕ್ಷ್ಮಣದಾಸ್  ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗಶಿಕ್ಷಣ ಕೇಂದ್ರದ ವತಿಯಿಂದ ಅಯೋಜಿಸಲಾಗಿದ್ದ ಪ್ರಚಂಡ ರಾವಣ  ಮತ್ತು ಯಾರು ಹೊಣೆ  ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲಾ ಕಲೆಗಳನ್ನು ರಂಗಭೂಮಿ ಒಳಗೊಂಡಿದೆ ಎಂದ ಅವರು ನಾಟಕ ಪ್ರದರ್ಶನದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು. ತುಮಕೂರಿನಲ್ಲಿ ರಂಗಭೂಮಿ ಸಕ್ರಿಯವಾಗಿದೆ. ಪೌರಾಣಿಕ ನಾಟಕ ಪ್ರದರ್ಶನಗಳು ಪ್ರತಿವಾರ ನಡೆಯುತ್ತಿರುವುದು ವಿಶೇಷ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು ಆಪಿನಕಟ್ಟೆ ಮಾತನಾಡಿ ರಂಗಭೂಮಿ ಜೀವಂತ ಕಲೆಯಾಗಿದೆ. ಎಲ್ಲಿ ನಾಟಕಗಳು ನಿರಂತರವಾಗಿ ನಡೆಯುತ್ತದೆಯೋ ಅಲ್ಲಿ ಜೀವಂತಿಕೆ ಇರುತ್ತದೆ ಎಂದರು. ಜಾನಪದ ವಿದ್ವಾಂಸ ಕಂಟಲಗೆರೆ ಸಣ್ಣಹೊನ್ನಯ್ಯ ಮಾತನಾಡಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕಲಾ ಪ್ರಕಾರಗಳು ಮನುಷ್ಯನಲ್ಲಿ ಜೀವಂತಿಕೆಯನ್ನು ಬೆಳೆಸುತ್ತದೆ ಎಂದರು.
ತುಮಕೂರು ರಂಗಭೂಮಿ ಕಲಾವಿದರ ಆಗರವಾಗಿದೆ. ಬಯಲುಸೀಮೆ ಪ್ರದೇಶಗಳಲ್ಲೇ ರಂಗಭೂಮಿ ವಿಷಯದಲ್ಲಿ ಮಿಕ್ಕೆಲ್ಲಾ ಜಿಲ್ಲೆಗಳಿಗಿಂತ ತುಮಕೂರು ಕ್ರಿಯಾಶೀಲವಾಗಿದೆ ಎಂದರು.
ಶ್ರೀರಂಗ ರಂಗ ಹವ್ಯಾಸಿ ಕೇಂದ್ರದ ಎಚ್.ಎಂ. ರಂಗಯ್ಯ ಮಾತನಾಡಿ ರಂಗಭೂಮಿಯ ದುನಿಯಾ ತುಮಕೂರಿನಲ್ಲಿ ಆರಂಭವಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಂಗಶಿಕ್ಷಣ ಕೇಂದ್ರದ ಸಿದ್ದರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement