ಆರೋಗ್ಯಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
ಹುಳಿಯಾರು: ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾಗಿರುವ ಹಾಗೂ ಹೆಚ್ಚು ವಾಪಾರ ವಹಿವಾಟಿನಿಂದ ಕೊಡಿರುವ ಹುಳಿಯಾರು ಪಟ್ಟಣ ಯಾವುದೇ ತಾಲೂಕು ಕೇಂದ್ರಗಳಿಗಿಂತ ಕಮ್ಮಿಯಿಲ್ಲ. ಅತಿ ಶೀಘ್ರದಲ್ಲಿ ಹುಳಿಯಾರು ತಾಲೂಕು ಕೇಂದ್ರವಾಗಲಿದೆ ಎಂದು ಶಾಸಕ ಸುರೇಶ್ಬಾಬು ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶೀಘ್ರಗತಿಯಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರುವ ಹುಳಿಯಾರನ್ನು ತಾಲೂಕು ಕೇಂದ್ರವಾಗಿಸುವುದರಿಂದ ಈ ಭಾಗದ ಜನಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದರು. ಹುಳಿಯಾರನ್ನು ಗ್ರಾಪಂ ಎಂದು ಪರಿಗಣಿಸದೇ ತಾಲೂಕು ಕೇಂದ್ರವೆಂದು ತಿಳಿದು ಹೆಚ್ಚಿನ ಅನುದಾನ ಮೀಸಲಿರಿಸುವುದಾಗಿ ತಿಳಿಸಿದರು. ಪಟ್ಟಣದಲ್ಲಿ ಮಾದರಿ ಆಸ್ಪತ್ರೆ ಅಗತ್ಯತೆಯಿದ್ದು ಈಗ ಅದರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಕ್ರಿಯಾಯೋಜನೆ ಸಿದ್ದವಾಗಿದ್ದು, ಇನ್ನೂ ಒಂದೂವರೆ ವರ್ಷದಲ್ಲಿ ಸುಸಜ್ಜಿತ ಅಸ್ಪತ್ರೆ ನಿರ್ಮಾಣವಾಗಲಿದೆ ಇದಕ್ಕೆ ಈ ಭಾಗದ ಎಲ್ಲರ ಸಹಕಾರ ಅಗತ್ಯ ಎಂದರು.
ತಹಶೀಲ್ದಾರ್ ಕಾಮಾಕ್ಷಮ್ಮ,ಇಓ ಕೃಷ್ಣನಾಯಕ್, ತಾಪಂ ಅಧ್ಯಕ್ಷ ನವೀನ್,ಜಿ.ಪಂ.ಸದಸ್ಯರಾದ ನಿಂಗಮ್ಮ,ಮಂಜುಳಾ, ಗ್ರಾಪಂ ಸದಸ್ಯರಾದ ರಾಘವೇಂದ್ರ,ಹೇಮಂತ್,ರಂಗನಾಥ್,ಅಬಿದುನ್ನಿದಾ,ಗೀತಾ,ಕಾಳಮ್ಮ ಸೇರಿದಂತೆ ವಿವಿಧ ಸಂಘಟನೆಯವರು,ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.