ರು. 8.90 ಕೋಟಿ ವೆಚ್ಚದ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಚಾಲನೆ
ಮಧುಗಿರಿ: ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆ 2ನೇ ಹಂತದ 8.90 ಕೋಟಿ ರು.ವೆಚ್ಚದಲ್ಲಿ ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಎನ್.ರಾಜಣ್ಣ ಬುಧವಾರ ಚಾಲನೆ ನೀಡಿದರು.
ತಾಲೂಕಿನ ತವಕದಹಳ್ಳಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಚುನಾವಣಾ ವೇಳೆ ಗ್ರಾಮಸ್ಥರು ನಮ್ಮ ಊರಿನ ರಸ್ತೆ ಅಭಿವೃದ್ಧಿ ಪಡಿಸಿ ಕೊಡುವಂತೆ ಮನವಿ ನೀಡಿದ್ದರು.ಅದರಂತೆ ತಾವು ಶಾಸಕನಾಗಿ ಆಯ್ಕೆಯಾದ 8 ತಿಂಗಳಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ ಎಂದರು.
ಈ ಸಂಪರ್ಕ ರಸ್ತೆ 5.34 ಕಿಮೀ ಇದ್ದು 32 ಅಡ್ಡ ಮೋರಿ ನಿರ್ಮಿಸಿ 3.13 ಕೋಟಿ ರು.ವೆಚ್ಚದಲ್ಲಿ ಸುಸಜ್ಜಿತ ಡಾಂಬರು ರಸ್ತೆ ಮಾಡಲಾಗುವುದು. ರಸ್ತೆ ಅಭಿವೃದ್ಧಿಯಿಂದ ಬಂದ್ರೇಹಳ್ಳಿ, ಸೋಂಪುರ, ತವಕದಹಳ್ಳಿ ಮತ್ತು ಬಿಜವರ ಗ್ರಾಮದ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ತುಮಕೂರು-ಮಧುಗಿರಿ ರಸ್ತಗೆ ಸಂಪರ್ಕ ಹೊಂದಿರುವ ಮಾರಿಬೀಳು ಸಂಪರ್ಕ ರಸ್ತೆ 2.75 ಕೋಟಿ ರು.ವೆಚ್ಚದಲ್ಲಿ 4.20 ಕಿಮೀ.ರಸ್ತೆ ನಿರ್ಮಾಣದಿಂದ ಮಾರಿಬೀಳು,ಗುಡಿರೊಪ್ಪ,ಹರಿಹರರೊಪ್ಪ,ಮತ್ತು ಕಮ್ಮನಕೋಟೆ ಜನರಿಗೆ ರಸ್ತೆ ಸಪಂರ್ಕ ಕಲ್ಪಿಸಿದಂತಾಗುತ್ತದೆ.ಮಧುಗಿರಿ-ಶಿರಾ ರಸ್ತೆ ಕವಣದಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರಹಳ್ಳಿಯಿಂದ- ಬಾಣಗಾರಹಳ್ಳಿ,ಗಿರಿಗೌಡನಹಳ್ಳಿ ಗ್ರಾಮದವರೆಗೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 5.19 ಕಿಮೀ.ಉದ್ದ ರಸ್ತೆ ನಿರ್ಮಾಣಕ್ಕೆ 3.ಕೋಟಿ ರು ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು ಈ ಪೈಕಿ 2.5 ಕಿಮೀ ದೂರ ಹೊಸ ತಂತ್ರಜ್ಞಾನ ಬಳಸಿ ವ್ಯವಸ್ಥಿತ ರಸ್ತೆ ನಿರ್ಮಿಸಲಾಗುವುದು ಎಂದು ವಿವರಿಸಿದರು.
ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜಿಪಂ ಸದಸ್ಯೆ ಸಮನ ಚಂದ್ರಶೇಖರ್, ತಾಪಂ ಅಧ್ಯಕ್ಷೆ ಸುನಂದ ಸಿದ್ದಪ್ಪ, ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ,ಸದಸ್ಯರಾದ ನಾಗಮ್ಮ,ಮಹಾಲಕ್ಷ್ಮಮ್ಮ,ಮರುವೇಕೆರೆ ಗ್ರಾ.ಪಂ.ಅಧ್ಯಕ್ಷೆ ರತ್ನಮ್ಮ,ಸದಸ್ಯೆ ರತ್ನಮ್ಮ,ಲಕ್ಷ್ಮೀರಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ನಟರಾಜು,ಶಿವಣ್ಣ,ರವಿ, ಪ್ರದೀಪ್ ಹಾಜರಿದ್ದರು.