ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಕಲಚೇತನರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು: ಸ್ವಾಮೀಜಿ

Vishwanath S
Updated On : 6 Mar 2014, 12:47 pm

ತಿಪಟೂರು: ವಿಕಲಚೇತನರು ಕೀಳರಮೆ ತೊಡೆದುಹಾಕಿ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಷಡಕ್ಷರ ಮಠದ ರುದ್ರಮುನಿಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ವಿಕಲಚೇತರ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ತುಮಕೂರು ವತಿಯಿಂದ ನಡೆದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ನೀಡುತ್ತಿರುವ ಐದು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ವಿಕಲಚೇತನರ ಏಳ್ಗೆಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಜೊತೆಗೆ ಸೌಲಭ್ಯಗಳನ್ನು ನೀಡಿದ್ದು, ಇದರ ಪ್ರಯೋಜನ ಪಡೆದುಕೊಂಡು ಸ್ವಾಭಿಮಾನ, ಆತ್ಮಾಭಿಮಾನ ಮತ್ತು ದೇಶಾಭಿಮಾನಗಳನ್ನು ಮೈಗೂಡಿಸಿಕೊಂಡು ಆದರ್ಶ ಬದುಕು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮುದ್ದಣ್ಣ ಇಲಾಖೆಯಿಂದ ತರಬೇತಿ ಕಾರ್ಯಕ್ರಮ ನೀಡುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಸಿಡಿಪಿಓ ಓಂಕಾರಪ್ಪ, ಸುಧೀಂದ್ರ, ಇನಾಯತ್‌ಖಾನ್, ಎಂ.ಆರ್.ಎನ್ ಚಿತ್ತಯ್ಯ, ಎಂ.ಬಿ.ಶಿವಶಂಕರ್, ಯೋಗಾನಂದಮೂರ್ತಿ, ಕೃಷ್ಣಮೂರ್ತಿ ಮತ್ತಿತರರಿದ್ದರು. ಯೋಗೇಂದ್ರಚಾರ್ ಪ್ರಾರ್ಥಿಸಿದರು. ಚಿತ್ತಯ್ಯ ನಿರೂಪಿಸಿದರು. ಯೋಗಾನಂದ್ ಸ್ವಾಗತಿಸಿದರು.
ಅಂಗವಿಕಲ ಕಲಾವಿದರಿಗೆ ಪ್ರೋತ್ಸಾಹ ಧನ ವಿತರಣೆ
ಪಾವಗಡ: ಮದಕರಿ ಗಡಿನಾಡು ಸಾಂಸ್ಕ್ರತಿಕ ಕಲಾ ಸಂಘ ಹನುಮಂತನಹಳ್ಳಿ, ಪಾವಗಡ ತಾ. ಮತ್ತು ತಾ. ಹವ್ಯಾಸಿ ಕಲಾವಿದರ ಸಂಘದ ವತಿಯಿಂದ ಅಶಕ್ತ ಅಂಗವಿಕಲ ಕಲಾವಿದರಿಗೆ ಪ್ರೋತ್ಸಾಹ ಧನ ಮತ್ತು ರಂಗಭೂಮಿ ಅಂಗವಿಕಲರಿಗೆ ವಾದ್ಯ ಪರಿಕರಗಳ ವಿತರಣೆ ಸಮಾರಂಭ ಮಾರ್ಚಿ 8ರಂದು ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಅಯೋಜಿಸಿರುವುದಾಗಿ ರಂಗಭೂಮಿ ಕಲಾವಿದ ಹಾಗೂ ನಾಟಕ ನಿರ್ದೇಶಕ ಕ್ಯಾದಿಗುಂಟೆ ನರಸಿಂಹಮೂರ್ತಿ ತಿಳಿಸಿದರು.
ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಜಿ.ಎಸ್.ಧರ್ಮಪಾಲ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಕೆ.ಎಂ ತಿಮ್ಮರಾಯಪ್ಪ ಉದ್ಘಾಟಿಸುವರು.
ರಾಮಕ್ರಷ್ಣಾಶ್ರಮದ ಅಧ್ಯಕ್ಷ ಜಪಾನಂದಾಜೀ ದಿವ್ಯ ಸಾನಿಧ್ಯ ವಹಿಸಲಿದ್ದು ಮಾಜಿ ಸಚಿವ ವೆಂಕಟರಮಣಪ್ಪ ಮಾಜಿ ಶಾಸಕ ಸೋಮ್ಲನಾಯ್, ಉಗ್ರನರಸಿಂಹಪ್ಪ, ವಿಶ್ರಾಂತ ಜಿಲ್ಲಾಧಿಕಾರಿ ದೊಡ್ಡಹಳ್ಳಿ ರಾಮಾಂಜಿನೇಯ, ಡಾ. ಜಿ.ವೆಂಕಟರಾಮಯ್ಯ, ಜಿಪಂ ಸದಸ್ಯ ಆರ್.ಸಿ.ಅಂಜಿನಪ್ಪ, ಎಚ್.ವಿ.ವೆಂಕಟೇಶ್,  ನಳಿನಾ ಗೋವಿಂದಪ್ಪ, ರೇಖಾ ಆಂಜನೇಯಲು, ಜಯಮ್ಮ, ಮಾನಂ ವೆಂಕಟಸ್ವಾಮಿ, ತಾಪಂ ಅಧ್ಯಕ್ಷೆ ರಾಧರಾಜ್‌ಗೋಪಾಲ್, ತಹಸೀಲ್ದಾರ್ ಆಲ್ತಾಪ್ ಪಾಷ, ಇಒ ತಿಪ್ಪೇಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ವೈ.ಆರ್.ಚೌದರಿ ಸಿಆರ್‌ಪಿ ಡಿ.ಎನ್.ಸತ್ಯನಾರಾಯಣ ವಸಂತ್‌ಕುಮಾರ್ ಪುರಸಭೆ ಸದಸ್ಯರು ಮತ್ತು ತಾ. ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಅವರು ತಿಳಿಸಿದರು.
ಶಾಸಕ ಕೆ.ಎಂ.ತಿಮ್ಮರಾಯಪ್ಪ ಹಾಗೂ ಅಂಗವಿಕಲರಿಗೆ ಪರಿಕರಗಳ ಧಾನಿಗಳಾದ ನಿವ್ರತ್ತ ಡಿಸಿ ರಾಮಾಂಜಿನೇಯ ಹಾಗೂ ಡಾ.ವೆಂಕಟರಾಮಯ್ಯ ಹಾಗೂ ಮಾಜಿ ಶಾಸಕರು, ಜಿಪಂ ಸದಸ್ಯರು ಮತ್ತು ತಾಪಂ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದರು. ಮದಕರಿ ಗಡಿನಾಡು ಕಲಾ ಸಂಘದ ಕಾರ್ಯದರ್ಶಿ ಹನುಮಂತನಹಳ್ಳಿ ಶಿವು, ಉಪನ್ಯಾಸಕ ಕೆ.ಟಿ.ಹಳ್ಳಿ ತಿಮ್ಮಯ್ಯ ಇದ್ದರು.ಜೆಡಿಎಸ್ ಬೆಂಬಲಿತ ವೀರೇಂದ್ರ ಜಯ
ಪಾವಗಡ: ತಾಲೂಕಿನ ಮರಿದಾಸನಹಳ್ಳಿ ಗ್ರಾಪಂ ಸದಸ್ಯರ ಆಯ್ಕೆ ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ವೀರೇಂದ್ರ 223 ಮತ ಪಡೆದು ಜಯಬೇರಿ ಸಾಧಿಸಿದ್ದಾರೆ. ತಾಲೂಕಿನ ಮರಿದಾಸನಹಳ್ಳಿ ಗ್ರಾಪಂ ವ್ಯಾಪ್ತಿಯ ತಿಪ್ಪಯ್ಯನದುರ್ಗದ ಗ್ರಾಪಂ ಸದಸ್ಯ ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಆಕಾಂಕ್ಷಿ ಪರಾಭವಗೊಂಡಿದ್ದು, ಜೆಡಿಎಸ್ ಹಿರಿಯ ಮುಖಂಡ ವಿ.ಚಿಂತಲರೆಡ್ಡಿ ಹಾಗೂ ಗೋವಿಂದಬಾಬು ನೇತೃತ್ವದಲ್ಲಿ ಪ್ರತಿ ಸ್ವರ್ಧಿ ಜೆಡಿಎಸ್ ಬೆಂಬಲಿತ ತಿಪ್ಪಯ್ಯನದುರ್ಗಜ ವೀರೇಂದ್ರ ಜಯ ಸಾಧಿಸಿದ್ದಾರೆ. ಗೆಲುವಿಗೆ ಶ್ರಮಿಸಿದ ಜಿಪಂ ಸದಸ್ಯೆ ರೇಖಾ ಆಂಜನೇಯ, ತಾಪಂ ಸದಸ್ಯ ಚಂದ್ರಶೇಖರ್, ಮುಖಂಡ ಬಸವರಾಜ್, ಪರಮೇಶ್, ಶ್ರೀರಾಮ್, ಯರಲಿಂಗರೆಡ್ಡಿ ಅವರಿಗೆ ನೂತನ ಸದಸ್ಯ ವೀರೇಂದ್ರ ಕೃತಜ್ಞತೆ ಸಲ್ಲಿಸಿದರು.
ವಿದ್ಯುತ್ ಕಳವು: ಇಬ್ಬರ ವಿರುದ್ಧ ಪ್ರಕರಣ ದಾಖಲು
ಚಿಕ್ಕನಾಯಕನಹಳ್ಳಿ: ಬೆಸ್ಕಾಂ ಜಾಗೃತ ದಳದವರು ವಿದ್ಯುತ್ ಕಳವು ಪ್ರಕರಣ ಪತ್ತೆ ಹಚ್ಚಿ ಕೇಸು ದಾಖಲಿಸಿದ್ದಾರೆ. ತಾಲೂಕಿನ ಕೇದಿಗೆಹಳ್ಳಿ ಪಾಳ್ಯದಲ್ಲಿ ಕರಿಯಪ್ಪ ಎಂಬುವರ ಪುತ್ರ ಕೆ.ಲಕ್ಕಪ್ಪ ಮತ್ತು ಮುನಿಸಿದ್ದಯ್ಯ ಎಂಬುವರ ಪುತ್ರ ಮಗ ನಾಗರಾಜು ಎಂಬುವರ ಮೇಲೆ ಅನಧಿಕೃತವಾಗಿ  ವಿದ್ಯುತ್ ಬಳಸುತ್ತಿದ್ದಾರೆಂದು  ತುಮಕೂರಿನ ಪೊಲೀಸ್ ಜಾಗೃತದಳದ ಇನ್‌ಸ್ಪೆಕ್ಟರ್‌ಗೆ ಖಚಿತ ಮಾಹಿತಿ ಸಿಕ್ಕಿತು.
ಇದರನ್ವಯ ಸಿಬ್ಬಂದಿಯೊಂದಿಗೆ ಮಾರ್ಚ್ 3ರಂದು ಸ್ಥಳಕ್ಕೆ ತೆರಳಿ ಪರೀಕ್ಷಿಸಲಾಗಿ 7.5 ಅಶ್ವಶಕ್ತಿಯ ವಿದ್ಯುತ್‌ನ್ನು ಮೀಟರ್ ಬೈಪಾಸ್ ಮಾಡಿ ಅನಧಿಕೃತವಾಗಿ ವಿದ್ಯುತ್ ಬಳಸುತ್ತಿರುವುದಕ್ಕೆ ಪ್ರಕರಣ ದಾಖಲಿಸಿದ್ದಾರೆ. ವಿದ್ಯುತ್‌ಕಾಯ್ದೆ 2003ರ ಕಲಂ 135 ಮತ್ತು ಕೆಇಆರ್‌ಸಿ ವಿದ್ಯುತ್ ಸರಬರಾಜು ಮತ್ತು ವಿತರಣೆ ಕೋಡ್ ಅಧಿನಿಯಮ 42.06 ಯೂನಿಟ್ ವಿದ್ಯುತ್‌ನ್ನು ಅನಧಿಕೃತವಾಗಿ ಬಳಸುತ್ತಿರುವುದರಿಂದ 12 ತಿಂಗಳಿಗೆ ಒಟ್ಟು ್ಟ8057 ಯೂನಿಟ್ ವಿದ್ಯುತ್ ಬಳಕೆ ಮಾಡಿರುವುದಾಗಿ ಅಂದಾಜು ಮಾಡಿದ್ದು, ಅದರ ಪ್ರಕಾರ ಕೆ.ಲಕ್ಕಪ್ಪಗೆ  159628 ರು.ಗಳನ್ನು ಮತ್ತು ನಾಗರಾಜು ಅವರಿಗೆ 8057 ಯೂನಿಟ್ ವಿದ್ಯುತ್ ಕಳವು ಮಾಡಿರುವ ಬಗ್ಗೆ 162436 ರು. ದಂಡ ಶುಲ್ಕ ವಿಧಿಸಿದ್ದು ಇನ್ನು 7 ದಿನದಲ್ಲಿ ಶುಲ್ಕ ಪಾವತಿಸ ಬೇಕೆಂದು ಅವರು ತಿಳಿಸಿದ್ದಾರೆ.
ವಿಶ್ವ ಮಹಿಳಾ ದಿನಾಚರಣೆ
ತುಮಕೂರು: ವರದಕ್ಷಿಣೆ ವಿರೋಧಿ ವೇದಿಕೆ ವತಿಯಿಂದ ಮಾ. 8 ರಂದು ಮಧ್ಯಾಹ್ನ 3 ಗಂಟೆಗೆ ವಿಶ್ವ ಮಹಿಳಾ ದಿನಾಚರಣೆ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೇಯರ್ ಗೀತಾರುದ್ರೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಲೇಖಕಿ ಬಾ.ಹ. ರಮಾಕುಮಾರಿ ಆಶಯ ನುಡಿಗಳನ್ನಾಡಲಿದ್ದಾರೆ.
   ಮುಖ್ಯ ಅತಿಥಿಗಳಾಗಿ ಉಪಮೇಯರ್ ಧನಲಕ್ಷ್ಮಿ ರವಿ ಪಾಲ್ಗೊಳ್ಳಲ್ಲಿದ್ದಾರೆ. ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ನೂತನ ಎಂ. ದೋಶೆಟ್ಟಿ ಪ್ರಧಾನ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆ ಜಿಲ್ಲಾ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಿಘ್ನ ಯುವ ಸಂವಾದ ಕೇಂದ್ರ ಹಾಗೂ ಹಸಿರು ಬಳಗದ ವತಿಯಿಂದ ಹೋರಾಟದ ಹಾಡುಗಳ ಕಾರ್ಯಕ್ರಮ ಏರ್ಪಾಟಾಗಿದೆ.
ಇಂದಿನಿಂದ ತಾಂತ್ರಿಕ ದಾಖಲೀಕರಣ ಕಾರ್ಯಾಗಾರ
ತುಮಕೂರು: ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜನಿಯರಿಂಗ್ ವಿಭಾಗದಿಂದ ಲಾಟೆಕ್ಸ್ ಬಳಸಿ ತಾಂತ್ರಿಕ ದಾಖಲೀಕರಣ ಎಂಬ ವಿಷಯ ಕುರಿತು ಮಾರ್ಚ್ 6 ರಿಂದ 8 ರವರೆಗೆ ಮೂರು ದಿನದ ಕಾರ್ಯಾಗಾರ ಏರ್ಪಡಿಸಲಾಗಿದೆ.
ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿರುವ ಸ್ಟೆಫ್ ಸೆಮಿನಾರ್ ಹಾಲ್‌ನಲ್ಲಿ ಬೆಳಿಗ್ಗೆ 9-30 ಕ್ಕೆ ಬೆಂಗಳೂರಿನ ಎನ್‌ಎಂಐಟಿ ಪ್ರೊ.ನಳಿನಿ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಸಿ.ಎನ್. ನರಸಿಂಹಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಾಂಶುಪಾಲ ಡಾ.ಕೆ.ಎ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
 ಡೀನ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥ ಡಾ.ಎಂ.ಝಡ್. ಕುರಿಯನ್ ಪಾಲ್ಗೊಳ್ಳಲಿದ್ದಾರೆ. ಹಲವಾರು ತಜ್ಞರು ವಿಷಯ ಮಂಡಿಸಲಿದ್ದಾರೆ.
  ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಸಿ.ಬಿ. ವಿನುತ ಮತ್ತು ಪ್ರವೀಣ್ ಅವರನ್ನು ಮೊ 97438 98373, 98869 03393 ರಲ್ಲಿ ಸಂಪರ್ಕಿಸಬಹುದು.
ಬ್ಯಾಡನೂರು ಬಗ್ಗೆವಿಚಾರಸಂಕಿರಣ
ತುಮಕೂರು: ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಇದೇ ತಿಂಗಳ 9 ರಂದು ಬೆಳಗ್ಗೆ 10-30 ಕ್ಕೆ ಬ್ಯಾಡನೂರು ನಾಗಭೂಷಣ ಅವರ ಬಾಲ್ಯ, ಬದುಕು, ಸಾಧನೆ ಕುರಿತು ವಿಚಾರ ಸಂಕಿರಣ ಹಾಗೂ ಬಣ್ಣದ ಲೋಕ ಮಕ್ಕಳ ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮ ಏರ್ಪಾಟಾಗಿದೆ. ಅಧ್ಯಕ್ಷತೆಯನ್ನು ವಿದ್ಯಾವಾಚಸ್ಪತಿ ಕವಿತಾಕೃಷ್ಣ ವಹಿಸಲಿದ್ದಾರೆ. ಡಯಟ್ ಡಿಡಿಪಿಐ ಎಚ್.ಎನ್. ಗೋಪಾಲಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್. ಮಹೇಶ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಖಜಾನೆ ಅಧೀಕ್ಷಕ ಪರಮೇಶ್ವರಪ್ಪ, ಅಕ್ಕಿರಾಂಪುರದ ಜಿಎಚ್‌ಎಸ್‌ನ ಮುಖ್ಯ ಶಿಕ್ಷಕ ಡಿ.ಆರ್. ಸಿದ್ದಲಿಂಗಾರಾಧ್ಯ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಕುರಿತು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ವಿಡಂಬನಾ ಸಾಹಿತ್ಯ ಕುರಿತು ಡಿ. ಚಂದ್ರಪ್ಪ, ಬ್ಯಾಡನೂರು ಶಾಂತವೀರಪ್ಪನವರಿಂದ ಉಪನ್ಯಾಸ ಏರ್ಪಾಟಾಗಿದೆ.
ಇಂದು ಕಾನೂನು ಅರಿವು ಕಾರ್ಯಕ್ರಮ
ಹುಳಿಯಾರು: ಇಲ್ಲಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ವತಿಯಿಂದ ಹೋಬಳಿಯ ಯಗಚಿಹಳ್ಳಿಯಲ್ಲಿ ಹಮ್ಮಿಕೊಡಿರುವ 2013-14 ನೇ ಸಾಲೀನ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನವಾದ ಗುರುವಾರ ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ. ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸುವರು. ಪ್ರಾಧ್ಯಾಪಕ ಅಶೋಕ್ ಅಧ್ಯಕ್ಷತೆ ವಹಿಸುವರು. ವಕೀಲರಾದ ಮಂಜುನಾಥ್, ಗೋಪಾಲಕೃಷ್ಣ ಮಹಿಳಾ ದೌರ್ಜನ್ಯ ತಡೆಕಾಯ್ದೆ ಮತ್ತು ರ್ಯಾಗಿಂಗ್ ತಡೆಕಾಯ್ದೆ ಬಗ್ಗೆ ಉಪನ್ಯಾಸ ನೀಡುವರು ಎಂದು ಶಿಬಿರಾಧಿಕಾರಿ ಶಂಕರಲಿಂಗಯ್ಯ ತಿಳಿಸಿದ್ದಾರೆ.
ಕಲ್ಲೇಶ್ವರ ಕ್ರಿಕೆಟರ್ಸ್‌ಗೆ ಪ್ರಥಮ ಬಹುಮಾನ
ತಿಪಟೂರು: ತಾಲೂಕಿನ ಕಸಬಾ ಹೋಬಳಿ ಕರೀಕೆರೆಯ ಬ್ರಹ್ಮಲಿಂಗೇಶ್ವರ ಯುವಕ ಸಂಘದ ವತಿಯಿಂದ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೂರನೇ ವರ್ಷದ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರೀಕೆರೆಯ ಕಲ್ಲೇಶ್ವರ ಕ್ರಿಕೆಟರ್ಸ್ ತಂಡ ಹುಚ್ಚಗೊಂಡನಹಳ್ಳಿ ತಂಡದ ವಿರುದ್ಧ 4 ರನ್‌ಗಳ ಗೆಲುವು ಸಾಧಿಸಿ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು. ಪಂದ್ಯಾವಳಿಯಲ್ಲಿ ತಿಪಟೂರು ಮತ್ತು ಅರಸೀಕೆರೆ ತಾಲೂಕಿನಿಂದ ಒಟ್ಟು 25 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ರನರ್ ಅಪ್ ತಂಡವಾಗಿ ಬಸವೇಶ್ವರ ಕ್ರಿಕೆಟರ್ಸ್ ದ್ವಿತೀಯ ಬಹುಮಾನ ಪಡೆಯಿತು. ಕೊನೇಹಳ್ಳಿ ಶಂಕರೇಶ್ವರ ಕ್ರಿಕೆಟರ್ಸ್ ತೃತೀಯ ಬಹುಮಾನ ಪಡೆಯಿತು. ಕಲ್ಲೇಶ್ವರ ಕ್ರಿಕೆಟರ್ಸ್ ತಂಡ ಆಟಗಾರ ದೀಪು ಪಂದ್ಯಶೇಷ್ಠ ಪ್ರಶಸ್ತಿಗೆ ಭಾಜರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement