ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗ್ರಾಮೀಣದಲ್ಲಿ ಕ್ರೀಡಾ ಚಟುವಟಿಕೆ ಹೆಚ್ಚು ನಡೆಯಲಿ: ವೆಂಕಟೇಶ್

Vishwanath S
Updated On : 8 Mar 2014, 1:05 am

ತಿಪಟೂರು: ಸತತ ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಯುವಕರು ಉದ್ಯೋಗ ಅರಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಕ್ರೀಡಾ ಚಟುವಟಿಕೆಗಳು ಕಡಿಮೆಯಾಗುತ್ತಿವೆ ಎಂದು ತಾಪಂ ಮಾಜಿ ಅಧ್ಯಕ್ಷ ವೆಂಕಟೇಶಯ್ಯ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಕರೀಕೆರೆ ಗ್ರಾಮದಲ್ಲಿ ಬ್ರಹ್ಮಲಿಂಗೇಶ್ವರ ಯುವಕ ಸಂಘ ಆಯೋಜಿಸಿದ್ದ ಮೂರು ದಿನಗಳ ಟನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ಮಾತನಾಡಿದ ಅವರು ನಗರ ಪ್ರದೇಶಗಳ ಕ್ರೀಡಾಪಟುಗಳಿಗೆ ಸಿಕ್ಕ ಅವಕಾಶ ಮತ್ತು ತರಬೇತಿ ಗ್ರಾಮೀಣ ಭಾಗಗಳ ಯುವಕರಿಗೆ ದೊರಕುತ್ತಿಲ್ಲ. ಇದರಿಂದ ಮಕ್ಕಳಲ್ಲಿರುವ ಪ್ರತಿಭೆಗಳು ಅರಳುವ ಮುನ್ನವೇ ಬಾಡುವ ಸ್ಥಿತಿ ನಿರ್ಮಾಣ ವಾಗುತ್ತಿದೆ. ಕ್ರೀಡಾ ಚಟುವಟಿಕೆಗಳು ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚು ನಡೆಯುವಂತಾಗಬೇಕು.
 ನಗರ ಪ್ರದೇಶಗಳ ಯುವಕರಿಗೆ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲು ತರಬೇತಿ ಸಂಸ್ಥೆಗಳಿರುತ್ತವೆ ಎಂದ ಅವರು ಕಳೆದ ಮೂರು ವರ್ಷಗಳಿಂದ ಕರೀಕೆರೆಯಲ್ಲಿ ಟೂರ್ನಿ ಆಯೋಜಿಸುತ್ತಿರುವುದು ಶ್ಲಾಘನೀಯವೆಂದರು.
ಅಧ್ಯಕ್ಷತೆ ವಹಿಸಿದ್ದ ಮತ್ತೀಹಳ್ಳಿ ಗ್ರಾಪಂ ಅಧ್ಯಕ್ಷ ಎಸ್.ಆರ್.ಮಲ್ಲೇಶ್ ಮಾತನಾಡಿದರು.
ಜಿಲ್ಲಾ ಯಾದವ ಸಮಾಜದ ಅಧ್ಯಕ್ಷ ತೀರ್ಥಕುಮಾರ್‌ಯಾದವ್, ಶಿವನಂಜಪ್ಪ, ಬ್ರಹ್ಮಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಪ್ರಶಾಂತ್, ಗ್ರಾಮದ ಚನ್ನಬಸವಯ್ಯ, ಮಲ್ಲಿಕಾರ್ಜುನ್, ಓಂಕಾರಮೂರ್ತಿ,ಬಸವರಾಜು ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement