ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಹೆಣ್ಣು ಭ್ರೂಣ ಹತ್ಯೆ: ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ'

Vishwanath S
Updated On : 9 Mar 2014, 1:25 am

ಕುಣಿಗಲ್: ಹೆಣ್ಣು ಭ್ರೂಣ ಹತ್ಯೆಗೆ ಕಠಿಣ ಕಾನೂನಿನ ಶಿಕ್ಷೆ ಇದೆ. ಮಹಿಳೆಯರು ಈ ಬಗ್ಗೆ ಕಾನೂನಿನ ತಿಳಿವಳಿಕೆ ಹೊಂದಿ ಜಾಗರೂಕರಾಗಬೇಕಿದೆ. ಹುಟ್ಟುವ ಮಗುವಿನ ಬೆಳವಣಿಗೆಗೆ ಪೂರಕವಾಗಿರಬೇಕಾದ ಭ್ರೂಣ ತಪಾಸಣೆ ಇಂದು ಲಿಂಗ ಪರೀಕ್ಷೆಗೆ ಬಳಕೆಯಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ ಎಂದು ನ್ಯಾಯಾಧೀಶೆ ಆರ್.ಶಾರದ ತಿಳಿಸಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ಅಂಚೇಪಾಳ್ಯ ಕೈಗಾರಿಕೆ ವಸಾಹತು ಪ್ರದೇಶದ ಪುಡ್ ಕಾರ್ಖಾನೆ ಮತ್ತು ಇತರೆ ಸಂಘ, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಕಾರ್ಮಿಕರಿಗೆ ಹಮ್ಮಿಕೊಳ್ಳಲಾದ ಕಾನೂನು ಅರಿವು ನೆರವು ಕಾರ್ಯಾಗಾರ ಉದ್ಧಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ರಾಮಾಯಣ ಕಾಲದಿಂದಲೂ ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದ  ಎಲ್ಲಾ ರೀತಿಯ ಸಮಾನತೆ ಹಕ್ಕುಗಳು ಪೂರ್ಣ ಪ್ರಮಾಣದಲ್ಲಿ ಸಿಗದೆ  ಇಂದಿಗೂ ಹೋರಾಟ ನಡೆಸುತ್ತಿದ್ದಾರೆ ಎಂದರು.
ಸರ್ಕಾರ ದುಡಿಯುವ ವರ್ಗದ ಮಹಿಳೆಯರಿಗಾಗಿ ಹಲವು ಉಪಯೋಗಕರ ಕಾನೂನುಗಳನ್ನು ಅನುಷ್ಠಾನಗೊಳಿಸಿದೆ. ಮಹಿಳೆಯರು ಇವುಗಳ ಬಗ್ಗೆ ಮಾಹಿತಿ ಹೊಂದುವ ಮೂಲಕ ಸಾಮಾಜಿಕ,ಮಾನಸಿಕವಾಗಿ,ಕಾನೂನಿನ ವಿಷಯದಲ್ಲೂ ಸಬಲರಾಗಿ ನೆಮ್ಮದಿಯುತ ಜೀವನ ರೂಪಿಸಿಕೊಳ್ಳಬಹುದೆಂದರು. ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳು, ನ್ಯಾಯಾಧೀಶೆ ದಾಕ್ಷಾಯಿಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಹಿಂಸಾಚಾರಗಳು ಮಹಿಳೆಯರನ್ನು ಕಾಡುತ್ತಿವೆ.ಇದರಿಂದ ರಕ್ಷಣೆ ಪಡೆಯಲು ಕೌಟುಂಬಕ ದೌರ್ಜನ್ಯ ವಿರೋಧಿ ಕಾಯಿದೆ ಸೇರಿದಂತೆ ಹಲವು ಪರಿಣಾಮ ಕಾರಿ ಕಾಯಿದೆಗಳಿದ್ದು ಇವುಗಳ ನೆರವಿನಿಂದ ದೌರ್ಜನ್ಯದಿಂದ ಮುಕ್ತಿಹೊಂದಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶೆ ದಾಕ್ಷಾಯಿಣಿ ಯಾವುದೇ ಕಾಯಿದೆ,ಕಾನೂನುಗಳನ್ನು ಮಹಿಳೆಯರು ಸಂಕಷ್ಟಕ್ಕೆ ಒಳಗಾದಾಗ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕೇ ಹೊರತು ಮತ್ತೊಬ್ಬರಿಗೆ ಕೆಡಕು ಉಂಟು ಮಾಡಲು ಬಳಸುವುದರಿಂದ ಕಾನೂನಿನ ಪರಿಣಾಮಕಾರಿ ಅಂಶಗಳು ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ, ಸ್ವಾಸ್ತ್ಯ ಮತ್ತು ಮಹಿಳಾ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೇಕೆಂದರು. ಕಾರ್ಯಕ್ರಮ  ಸಂಘಟಕ, ಕಾರ್ಖಾನೆ ವ್ಯವಸ್ಥಾಪಕ ಜಗದೀಶನಾಯಕ,ವಕೀಲರಾದ  ವಿಶಾಲಾಕ್ಷಿ, ಅನುಪಮ, ಕಾರ್ಮಿಕ ನಿರೀಕ್ಷಕ ರಾಜಶೇಖರರ್ವಿವಿಧ ಮಹಿಳಾ ಸಬಲೀಕರಣದ ಕಾನೂನುಗಳ ಬಗೆ ಉಪನ್ಯಾಸ ನೀಡಿದರು. ವಕೀಲರಾದ ದಯಾನಂದ, ಸುರೇಶ, ಚಂದ್ರಶೇಖರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement