ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

17 ರಿಂದ ಉದ್ಧಾನ ವೀರಭದ್ರಸ್ವಾಮಿ, ಭದ್ರಕಾಳಮ್ಮ ಜಾತ್ರಾ ಮಹೋತ್ಸವ

Vishwanath S
Updated On : 12 Mar 2014, 1:27 am

ಕನ್ನಡಪ್ರಭ ವಾರ್ತೆ ,  ತುಮಕೂರು ,  ಮಾ.11
ತುಮಕೂರು ಸಮೀಪದ ಹಳೇ ನಿಜಗಲ್‌ನಲ್ಲಿರುವ ಉದ್ದಾನ ವೀರಭದ್ರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಮಾ. 17 ರಿಂದ 19 ರವರೆಗೆ ಉದ್ಧಾನ ವೀರಭದ್ರಸ್ವಾಮಿ ಮತ್ತು ಭದ್ರಕಾಳಮ್ಮನವರ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಮಾ. 17 ರಂದು ಬೆಳಗ್ಗೆ ವೀರಭದ್ರಸ್ವಾಮಿ ಸೇರಿದಂತೆ ವಿವಿಧ ದೇವರುಗಳಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಮಹಾರುದ್ರಾಭಿಷೇಕ ಏರ್ಪಡಿಸಲಾಗಿದೆ. ಮಾ. 18 ರಂದು ಬೆಳಗ್ಗೆ ವೀರಭದ್ರಸ್ವಾಮಿ ಹಾಗೂ ಭದ್ರಕಾಳಮ್ಮನವರಿಗೆ ಆಭರಣ ಅಲಂಕಾರ ಹಮ್ಮಿಕೊಳ್ಳಲಾಗಿದೆ.
ಅಂದು ರಾತ್ರಿ ಅಗ್ನಿಕುಂಡ ಹಾಗೂ ಆರತಿ, ವೀರಗಾಸೆ ಕುಣಿತ, ನಂದಿದ್ವಜ ಕುಣಿತವಿದ್ದು, ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿವೆ. ಮಾ. 19 ರಂದು ಬೆಳಗ್ಗೆ ರುದ್ರಾಭಿಷೇಕ, ಹೂವಿನ ಅಲಂಕಾರ, ಸಂಜೆ ವೀರಭದ್ರಸ್ವಾಮಿ,
ಭದ್ರಕಾಳಮ್ಮ, ನಿಜಗಲ್ ಗ್ರಾಮ ದೇವತೆ ಮಾರಮ್ಮ ಉತ್ಸವ ಮೂರ್ತಿಗಳ ವೈಭವದ ಮುತ್ತಿನ ಪಲ್ಲಕ್ಕಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕಾಳಿಕಾ ಮಠ ಮಹಾಸಂಸ್ಥಾನದ ಯೋಗೇಶ್ವರ  ಋಷಿಕುಮಾರ ಸ್ವಾಮಿಯವರು ನಂದಿಧ್ವಜ, ವೈಭವದ ಮುತ್ತಿನ ಪಲ್ಲಕ್ಕಿ ಉತ್ಸವ ಉದ್ಘಾಟಿಸಲಿದ್ದಾರೆ. ತಮಿಳ್ನಾಡಿನ ಹೆಸರಾಂತ ಜಾನಪದ ಕಲಾತಂಡಗಳಿಂದ  ಊರಿನ ಪ್ರಮುಖ ಬೀದಿಗಳಲ್ಲಿ ಜನಪದ ಕಲೆಗಳೊಂದಿಗೆ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉದ್ದಾನ ವೀರಭದ್ರಸ್ವಾಮಿ ಸೇವಾ ಟ್ರಸ್ಟ್ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement