ಶಿರಾ ನಗರಸಭೆ ಅಧ್ಯಕ್ಷೆ ಕಾಂಗ್ರೆಸ್ನ ಜ್ಞಾನಪೂರ್ಣಮ್ಮ
ಶಿರಾ: ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಕಾಂಗ್ರೆಸ್ನ ಜ್ಞಾನಪೂರ್ಣಮ್ಮ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನಿಂದ ಆರ್. ಉಗ್ರೇಶ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಅಬ್ದುಲ್ ಖಾದೀರ್ ಇಬ್ಬರೂ ನಾಮಪತ್ರ ಸಲ್ಲಿಸಿದ್ದರು. ಕಡೆಯದಾಗಿ ಜೆಡಿಎಸ್ನ ಆರ್. ಉಗ್ರೇಶ್ ತಮ್ಮ ನಾಮಪತ್ರ ಹಿಂಪಡೆದು ಅಂತಿಮವಾಗಿ ಕಣದಲ್ಲಿದ್ದ 13 ನೇ ವಾರ್ಡ್ನ ಅಬ್ದುಲ್ ಖಾದೀರ್ ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಇಲ್ಲಿನ ನಗರಸಭೆಯಲ್ಲಿ ಒಟ್ಟು 31 ಸ್ಥಾನಗಳಿದ್ದು ಇದರಲ್ಲಿ 15 ಮಂದಿ ಕಾಂಗ್ರೆಸ್, 10 ಜೆಡಿಎಸ್, 5 ಮಂದಿ ಪಕ್ಷೇತರರು ಹಾಗೂ ಒಬ್ಬ ಬಿಜೆಪಿ ಸದಸ್ಯರಿದ್ದಾರೆ.
ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಪರಿಣಾಮ ಕಾಂಗ್ರೆಸ್ನ ಶ್ರೀಮತಿ ಜ್ಞಾನಪೂರ್ಣಮ್ಮ ಒಬ್ಬರೇ ಇದ್ದುದರಿಂದ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಲು ಸುಗಮವಾಯಿತು.
ಚುನಾವಣಾಧಿಕಾರಿಗಳಾಗಿ ಉಪವಿಭಾಗಾಧಿಕಾರಿಗಳಾದ ಎಚ್.ಸಿ. ಅನಿತಾ ಲಕ್ಷ್ಮಿ ಅವರು ಕಾರ್ಯನಿರ್ವಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರದ ಶಾಸಕರು ಆದ ಟಿ.ಬಿ.ಜಯಚಂದ್ರ, ತಹಸೀಲ್ದಾರ್ ರಂಗನಾಥ್, ಪೌರಾಯುಕ್ತ ಈರಾನಾಯ್ಕ ಮತ್ತಿತರರು ಹಾಜರಿದ್ದರು.