ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಮಾಜದ ಅಂಕುಡೊಂಕು ತಿದ್ದಲು ಕಲಾರಂಗಕ್ಕೆ ಸಾಧ್ಯ

Vishwanath S
Updated On : 15 Mar 2014, 1:23 am

ತುಮಕೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಧೀಮಂತ ಶಕ್ತಿ ಹಾಗೂ ಯುಕ್ತಿ ಇದ್ದದ್ದು ಕಲಾರಂಗಕ್ಕೆ ಮಾತ್ರ ಎಂದು ಕೆ.ಬಿ.ಆರ್. ಡ್ರಾಮಾ ಕಂಪನಿ ಮಾಲೀಕ ಚಿಂದೋಡಿ ಚಂದ್ರಣ್ಣ ಅಭಿಪ್ರಾಯಪಟ್ಟರು.ಅವರು ಇಲ್ಲಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗುಬ್ಬಿ ವೀರಣ್ಣಾಸ್ ಗುಬ್ಬಿ ಡ್ರಾಮಾ ಕಂಪನಿ ವತಿಯಿಂದ ವಿನೋದ ಸದಾರಮೆ ಎಂಬ 25ನೇ ಪ್ರದರ್ಶನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಲಾರಂಗದಿಂದ ವಿವಿಧ ರೀತಿಯ ಸವಾಲುಗಳನ್ನು ಸಮಾಜ ಸರಿದೂಗಿಸಲು ರಂಗಭೂಮಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದ ಅವರು ಇದಕ್ಕೆ ಸಾಕ್ಷಿಯಾಗಿ ಗುಬ್ಬಿ ಕಂಪನಿಯ ನಾಲ್ಕನೇ ತಲೆಮಾರಿನ ವಿನೋದ್ ಗುಬ್ಬಿ ವೀರಣ್ಣ ಬಂದಿದ್ದಾರೆ ಎಂದರು.
ಹರಿಕಥಾ ವಿದ್ವಾನ್ ವಿದ್ವಾನ್ ಡಾ. ಲಕ್ಷ್ಮಣದಾಸ್ ಮಾತನಾಡಿ ಗುಬ್ಬಿ ಕಂಪನಿಯ ಶತಮಾನೋತ್ಸವವನ್ನು ಆಚರಿಸಿ ಅತ್ಯಾಧುನಿಕ ಜಗತ್ತಿಗೆ ಹಿಂದಿನ ಕಲೆಯ ಜೀವವನ್ನು ಬೆಳಗಿಸುವುದರ ಮೂಲಕ ಜೀವ ತುಂಬುತ್ತಾ ಬಂದಿದೆ ಎಂದರು. ಹೆಬ್ಬಾಕ ಸಿದ್ಧಲಿಂಗಪ್ಪ, ಎನ್.ಎಸ್. ಮೂರ್ತಿ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮವನ್ನು ಮಹದೇವಯ್ಯ ಉದ್ಘಾಟಿಸಿದರು. ಜಯರಾಜ್, ರಾಜೇಶ್ ಗುಬ್ಬಿ,  ಜಯಣ್ಣ, ಉಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement