ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶರೀಫರ ಆದರ್ಶ ಸಮಾಜಕ್ಕೆ ಪ್ರಸ್ತುತ: ನರಸಿಂಹಮೂರ್ತಿ

Mainashree
Updated On : 18 Mar 2014, 12:49 pm

ತಿಪಟೂರು: ತಾಲೂಕು ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯನ್ನು ಸಂಘದ ಅಧ್ಯಕ್ಷರಾದ ಜಿ.ಟಿ. ಶಂಕರೇಗೌಡರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಶುನಾಳ ಶರೀಫರ ತತ್ವಪ್ರಚಾರಕರು ಹಾಗೂ ಕಾರ್ಖಾನೆಗಳ ನಿರ್ದೇಶಕರ ಕಚೇರಿ ವ್ಯವಸ್ಥಾಪಕರಾದ ಎಂ.ಸಿ. ನರಸಿಂಹಮೂರ್ತಿಯವರು ಶರೀಫರ ತತ್ವಗಳು ಪ್ರಸ್ತುತ. ಪ್ರತಿಯೊಬ್ಬರು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದರು. ಅವರು ನಿವೃತ್ತ ನೌಕರರ ಸಾಧನೆ ಕುರಿತು ಪದಗಳನ್ನು ಹಾಡಿದರು.  ಸಂಘದ ಸದಸ್ಯ ಚಂದ್ರಶೇಖರ ಚಿ. ತೋಟದ  ತತ್ವ ಪ್ರಚಾರಕರಾದ ಎಂ.ಸಿ.ನರಸಿಂಹಮೂರ್ತಿ ಕಿರುಪರಿಚಯ ಮಾಡಿಕೊಟ್ಟರು. ಸುಮಾರು 3ಸಾವಿರಕ್ಕೂ ಹೆಚ್ಚು ಪ್ರವಚನಗಳನ್ನು ಅವರು ನೀಡಿದ್ದಾರೆಂದು ತಿಳಿಸಿದರು. ಸಂಘದ ವತಿಯಿಂದ ಎಂ.ಸಿ. ನರಸಿಂಹಮೂರ್ತಿಯವರನ್ನು ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿ ವೆಂಕಟರಾಮಯ್ಯ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement