ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಳಸಂತೆಯಲ್ಲಿ 'ಅನ್ನಭಾಗ್ಯ': ಪಿಎಐ-ವಕೀಲರ ಚಕಮಕಿ

Mainashree
Updated On : 19 Mar 2014, 12:23 pm

ಪಾವಗಡ: ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಮತ್ತು ಪಿಎಐ ಮಧ್ಯೆ ಮಾತಿನ ಚಕಮಕಿ ನಡೆದು ವಕೀಲರನ್ನು ಥಳಿಸಿ ಕಲ ಸಮಯ ಠಾಣೆಯಲ್ಲಿ ಬಂಧಿಸಿದ ಘಟನೆ ಮಂಗಳವಾರ ಪಾವಗಡ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅನ್ನಭಾಗ್ಯ ಅಕ್ಕಿ ಕಾಳಸಂತೆಯ ಮಾರಾಟಕ್ಕೆ ಸಂಬಂಧಿಸಿದಂತೆ ಪಾವಗಡ ಪೊಲೀಸರು ಕಳೆದ 15ದಿನಗಳ ಹಿಂದೆ ಪಟ್ಟಣದ ಗೌರಜ್ಜಪಲ್ಲಿ ಶಂಕರಪ್ಪ ಎಂಬುವರ ಮಿಲ್ ಮೇಲೆ ದಾಳಿ ನಡೆಸಿ ಮಿಲ್‌ಗೆ ಬೀಗ ಜಡಿದು ಆಕ್ರಮ ಸಾಗಣಿಕೆಯಲ್ಲಿ ನಿರತವಾದ ಲಾರಿ ಹಿಡಿದು ಚಾಲಕ ಮತ್ತು ಮಾಲೀಕ ಶಂಕರಪ್ಪ ಹಾಗೂ ಗೌರಜ್ಜಪಲ್ಲಿ ಶಂಕರಪ್ಪ ಕುಟುಂಬದ ಕೆಲ ಸದಸ್ಯರ ಮೇಲೆ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದಾಗಿ ತಿಳಿದಿದೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಲೀಕ ಗೌರಜಪಲ್ಲಿ ಶಂಕರಪ್ಪ ಅವರ ಕುಟುಂಬದ ಕೆಲ ಸದಸ್ಯರನ್ನು ಠಾಣೆಗೆ ಕರೆಸಿಕೊಂಡು ಪಿಎಸ್‌ಐ ಆಶೋಕ್‌ಕುಮಾರ್ ವಿಚಾರಣೆ ಮಾಡುವ ಸಂದರ್ಭದಲ್ಲಿ ಪಿಎಸ್‌ಐ ಅಶೋಕ್‌ಕುಮಾರ್ ಮತ್ತು ಇದೇ ವಿಚಾರವಾಗಿ ಠಾಣೆಗೆ ಭೇಟಿ ಕೊಟ್ಟಿದ್ದ ತಾಲೂಕು ಜೆಡಿಎಸ್ ಅಧ್ಯಕ್ಷರೊಬ್ಬರ ಪುತ್ರ ಹಾಗೂ ಪಾವಗಡ ಜೆಎಂಎಪ್‌ಸಿ ನ್ಯಾಯಾಲಯ ವಕೀಲ ರಘುನಾಥ್‌ರೆಡ್ಡಿ  ಎಂಬುವರ ಮದ್ಯೆ ಮಾತಿನ ಚಕಮಕಿ ನಡೆದು ಪಿಎಸ್‌ಐ ಮೇಲೆ ಹಲ್ಲೆ ವಕೀಲರು ಹಲ್ಲೆ ಮಾಡಿದ್ದಾರೆಂದು ಹಾಗೂ ಇದೇ ಸಂದರ್ಭದಲ್ಲಿ ಠಾಣೆಯಲ್ಲಿಯೇ ಪೊಲೀಸರು ವಕೀಲ ರಘುನಾಥರೆಡ್ಡಿ ಅವರನ್ನು ಬಂಧಿಸಿ ಥಳಿಸಿದ್ದಾರೆಂದು ತಿಳಿದಿದೆ. ಘಟನೆ ವಿಕೋಪಕ್ಕೆ ತಿರುಗುವ ಹಂತದಲ್ಲಿ ವಕೀಲರ ಸಂಘದ ಕೆಲ ಪದಾಧಿಕಾರಿಗಳು ಮತ್ತು ಜೆಡಿಎಸ್‌ನ ಕೆಲ ಮುಖಂಡರು ಠಾಣೆಗೆ ಆಗಮಿಸಿ ಪಿಎಸ್‌ಐ ಅಶೋಕ್‌ಕುಮಾರ್ ಅವರನ್ನು ಭೇಟಿ ಮಾಡಿ ಠಾಣೆಯಲ್ಲಿ ಮಾತುಕತೆ ಮೂಲಕ ಸಂಧಾನ ನಡೆಸಿ ಪ್ರಕರಣ ಕೈಬಿಟ್ಟಿರುವುದಾಗಿ ಪೊಲೀಸ್ ಮತ್ತು ಸಾರ್ವಜನಿಕ ವಲಯಗಳಿಂದ ತಿಳಿದಿದೆ.
ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಕೊರಟಗೆರೆ: ವಿದ್ಯಾರ್ಥಿಗಳ ಬದುಕಿನಲ್ಲಿ 10ನೇ ತರಗತಿ ಎನ್ನುವುದು ಒಂದು ಬದಲಾವಣೆ ಹಂತ ಈ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮವಾಗಿ ವಿದ್ಯಾಬ್ಯಾಸ ಮಾಡಬೇಕು ಎಂದು ರವೀಂದ್ರ ಭಾರತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ.ಆರ್.ಮಲ್ಲಿಕಾರ್ಜುನ್ ತಿಳಿಸಿದರು. ಪಟ್ಟಣದ ಜೆ.ಕೆ ಮೆಮೋರಿಯಲ್ ಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಏರ್ಪಸಿದ್ದ ಬೀಳ್ಕೊಡುಗೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಸಂಸ್ಥೆಯ ಕಾರ್ಯದರ್ಶಿ ಡಾ. ಶೋಬಾ, ಸಹ ಕಾರ್ಯದರ್ಶಿ ಕೆ. ನವೀನ್ ಕುಮಾರ್, ಉಪ ಪ್ರಾಂಶುಪಾಲೆ ಆದಿಲಕ್ಷ್ಮೀ, ಸಲಹೆಗಾರರಾದ ಉಪನ್ಯಾಸಕ ಕೆ.ಎಸ್. ಈರಣ್ಣ, ಸುಧಾಮಣಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement