ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೃಷ್ಣಪ್ಪ ಗೆಲವಿಗೆ ಒಗ್ಗಟ್ಟಿನ ಮಂತ್ರ

Mainashree
Updated On : 19 Mar 2014, 12:27 pm

ತುಮಕೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ ಅವರ ಗೆಲುವಿಗೆ ಪಕ್ಷದ ಮುಖಂಡರು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ.
ಎ. ಕೃಷ್ಣಪ್ಪ ಅವರ ಗೆಲವಿಗೆ ಎಲ್ಲರೂ ಶ್ರಮಿಸಿ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ಕರೆ ನೀಡಿದರು. ಅವರು ಪಕ್ಷದ ಕಚೇರಿಯಲ್ಲಿ ನಡೆದ ಜೆಡಿಎಸ್ ಮುಖಂಡರ, ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆಡಿಎಸ್ ಜಾತ್ಯತೀತ ಮನೋಭಾವನೆಯುಳ್ಳ ಪಕ್ಷ. ಲೋಕಸಭಾ ಅಭ್ಯರ್ಥಿ  ಎ. ಕೃಷ್ಣಪ್ಪ ಶಾಸಕರಾಗಿ, ಸಚಿವರಾಗಿ, ಪ್ರಾಮಾಣಿಕ ಆಡಳಿತ ನಡೆಸಿದ ಇವರು ರಾಜ್ಯದ ಹಿಂದುಳಿದ ವರ್ಗಗಳ ನಾಯಕ. ಹಾಗೂ ಎಂದು ಒಂದು ಜಾತಿಗೆ ಕಟ್ಟು ಬೀಳದೆ ಎಲ್ಲ ವರ್ಗದವರನ್ನು ಜೊತೆಗೂಡಿಸಿಕೊಂಡು ಆಡಳಿತ ನಡೆದ್ದಾರೆ. ಲೋಕಸಭಾ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ನಾವೆಲ್ಲರೂ ಸಹ ಒಗ್ಗೂಡಿ ಇವರ ಗೆಲವಿಗೆ ಶ್ರಮಿಸಬೇಕೆಂದು ತಿಳಿಸಿದರು.
ಗುಬ್ಬಿ ಶಾಸಕ ಶ್ರೀನಿವಾಸ್ ಮಾತನಾಡಿ, ಜೆಡಿಎಸ್ ಕೇವಲ ಮೇಲ್ವರ್ಗದ ಪಕ್ಷವಲ್ಲ. ಇಲ್ಲಿ ಎಲ್ಲಾ ಜನಾಂಗದವರಿಗೂ ಅಧಿಕಾರ ಸಿಗುತ್ತದೆ ಎನ್ನುವುದಕ್ಕೆ ಎ.ಕೃಷ್ಣಪ್ಪನವರನ್ನು ಅಭ್ಯರ್ಥಿಯನ್ನಾಗಿ ಮಾಡಿರುವುದೇ ಸಾಕ್ಷಿ. ನನ್ನ ಕ್ಷೇತ್ರದಲ್ಲಿ ಇವರ ಗೆಲವಿಗಾಗಿ ಹಗಲು ರಾತ್ರಿ ಶ್ರಮಿಸಿ ಕೆಲಸ ಮಾಡುತ್ತೇನೆ. ಎಂದರಲ್ಲದೆ ನಮ್ಮ ಪಕ್ಷವು ತಳಮಟ್ಟದ ಕಾರ್ಯಕರ್ತರಿಂದ ಸದೃಢವಾಗಿದ್ದು, ನಮಗೆ ಗೆಲುವು ನಿಶ್ಚಿತ ಎಂದರು.
ತರುವೇಕರೆ ಶಾಸಕ ಎಂ.ಟಿ. ಕೃಷ್ಣಪ್ಪನವರು ನನ್ನ ಕ್ಷೇತ್ರದಲ್ಲಿ ಚುನಾಯಿತ ಪ್ರತಿನಿಧಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದಲ್ಲಿದ್ದು ಈಗಾಗಲೇ ನಾವು  ನಮ್ಮ ಅಭ್ಯರ್ಥಿಯ ಪರವಾಗಿ ಪೂರ್ವ ತಯಾರಿ ಮಾಡಿಕೊಂಡಿದ್ದು, ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮತ ಕೊಡಿಸುವುದರ ಮೂಲಕ ಇವರನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದರು.
ಚಿ.ನಾ.ಹಳ್ಳಿ  ಶಾಸಕ ಸುರೇಶ್‌ಬಾಬು ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಹಿಂದುಳಿದ ಮತಗಳಿದ್ದು, ನಮ್ಮ ಅಭ್ಯರ್ಥಿಯು ಸಹ ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಜೊತೆಗೆ ಎಲ್ಲಾ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ನಾವೆಲ್ಲರೂ ಕೂಡಿ ಇವರ ಗೆಲುವಿನ ಶ್ರಮಿಸಲೇಬೇಕು ಎಂದು ಕಾರ್ಯಕರ್ತರಿಗೆ ಕರೆನೀಡಿದರು.
ಕೊರಟಗೆರೆ ಶಾಸಕ ಸುಧಾಕರ್‌ಲಾಲ್ ಮಾತನಾಡಿ, ಮೀಸಲಾತಿ ಕ್ಷೇತ್ರವಾಗಿರುವ ನನ್ನ ಕ್ಷೇತ್ರದಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲೂ ಚುನಾವಣೆ ಎದುರಿಸಿದ ನನಗೆ ಇಲ್ಲಿನ ಜನರ ನಾಡಿ ಮಿಡಿತ ಗೊತ್ತಿದೆ. ಹಾಗಾಗಿ ಈ ಚುನಾವಣೆಯಲ್ಲೂ ನಮ್ಮ ಗೆಲವು ನಿಶ್ಚಿತ ಎಂದರು.
ತುಮಕೂರು ಲೋಕಸಭಾ ಅಭ್ಯರ್ಥಿ ಎ. ಕೃಷ್ಣಪ್ಪ ಮಾತನಾಡಿ, ನನಗೆ ಈ ಜಿಲ್ಲೆಯು ಅಪರಿತವೇನಲ್ಲ. ನಾನೀಗಾಗಲೇ ಎಲ್ಲಾ ತಾಲೂಕು ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಇಲ್ಲಿನ ಜನರು ನನ್ನನ್ನು ಹೊರಗಿನವನೆಂದು ಭಾವಿಸುತ್ತಿಲ್ಲ, ಹಾಗಾಗಿ ಇಲ್ಲಿನ ಜನರ ಬಗ್ಗೆ ನನಗೆ ನಂಬಿಕೆ ಇದೆ. ನಾನು ಇವರನ್ನು ನಂಬಿ ಬಂದಿದ್ದೇನೆ. ಅವರು ನನ್ನ ನಂಬಿಕೆಗೆ ಹುಸಿ ಮಾಡಲಾರರು ನನ್ನ ಗೆಲುವು ಖಂಡಿತ ಎಂದರು.
ಜೆಡಿಎಸ್ ರಾಜ್ಯ ಮುಖಂಡರಾದ ಎಚ್.ಸಿ. ನೀರಾವರಿ, ಶೀಲಾನಾಯಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ ನಾಗರಾಜು. ಜಾನಮ್ಮ ರಾಮಚಂದ್ರಯ್ಯ, ಅಮರನಾಥ್, ಅನ್ನದಾನಿ, ಗೋವಿಂದರಾಜು, ಡಾ.ರವಿ ನಾಗರಾಜಯ್ಯ. ಹುಚ್ಚಯ್ಯ, ಕೃಷ್ಣಪ್ಪ, ಜಿ.ಜೆ. ರಾಜಣ್ಣ, ಗಂಗಣ್ಣ, ನಾಗರಾಜು, ಬಾಲಕೃಷ್ಣ, ಲೋಕೇಶ್, ವಾಸುದೇವ್, ನರಸಿಂಹರಾಜು, ಬಾಲವರ್ಧನ್,  ಜನಾರ್ದನ್, ಇಕ್ಬಾಲ್, ಬೋರೇಗೌಡ, ಬೆಳ್ಳಿ ಲೋಕೇಶ್,  ನರಸೇಗೌಡರು. ಲಕ್ಷಮ್ಮ, ತಾಹಿರಾ, ಕುಸುಮ, ರಾಣಿ ಚಂದ್ರಶೇಖರ್, ಲಕ್ಷ್ಮೀನಾಯಕ್,  ಯಶೋದ, ಪ್ರಮೀಳಾ ನಾಗೇಶ್, ಮಂಜುಳ, ಸರ್ವಮಂಗಳ, ಚೆಲುವರಾಜು, ಕೃಷ್ಣಮೂರ್ತಿ, ಮಧು, ಜಯಣ್ಣ, ವಕ್ತಾರ ಮಲ್ಲಿಕಾರ್ಜುನ್, ಮುಜಾಯಿದ್, ಚಂದ್ರಬಾಬು. ಬಾಬು, ಮ್ಯಾಥ್ಯು ಶಂಕರ್, ಮುಂತಾದವರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement