ದುರ್ಗಾದೇವಿ ಕೆರೆಯಲ್ಲಿ ಮೂರು ಶವ ಪತ್ತೆ
ಹಿರೇಕೆರೂರು: ಪಟ್ಟಣದ ಶ್ರೀ ದುರ್ಗಾದೇವಿ ಕೆರೆಯಲ್ಲಿ ಮೂರು ಶವಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿವೆ. ತಾಲೂಕಿನ ಚಿಕ್ಕೋಣತಿ ಗ್ರಾಮದ ಶಿವಾನಂದಪ್ಪ ಮುಗಳಹಳ್ಳಿ ಎಂಬಾತನ ಪತ್ನಿ ಸರಸ್ವತಿ (26), ಪುತ್ರರಾದ ಶಶಾಂಕ್ (7) ಹಾಗೂ ಆಕಾಶ್ (5) ಶವಗಳು ಇವು ಎಂದು ಗುರುತಿಸಲಾಗಿದೆ. ಇವರು ಕೆಲವು ವರ್ಷಗಳಿಂದ ಶಿಕಾರಿಪುರ ಪಟ್ಟಣದಲ್ಲಿ ಫುಟ್‌ಪಾತ್ ಮೇಲೆ ಹೋಟೆಲ್ ನಡೆಸುತ್ತಾ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಕೊಲೆಯೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಲ್ಲಿ ಇಲಿ ಜ್ವರ ಪತ್ತೆ
ಪುತ್ತೂರು: ತಾಲೂಕಿನ ನಿಡ್ಪಳಿ ಗ್ರಾಮದಲ್ಲಿ ಇಲಿಜ್ವರ ಪ್ರಕರಣ ಪತ್ತೆಯಾಗಿದ್ದು, ರೋಗಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಡ್ಪಳಿ ನಿವಾಸಿ ಐತ್ತ ಮೊಗೇರ ಎಂಬವರ ಪುತ್ರ ಕೂಲಿ ಕಾರ್ಮಿಕ ಹರೀಶ್ ಎಂಬವರಿಗೆ ಜ್ವರ ಕಾಣಿಸಿಕೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಹರೀಶ್ ಅವರನ್ನು ಪರೀಕ್ಷಿಸಿದ ವೈದ್ಯರು ಇಲಿ ಜ್ವರವಿರುವುದಾಗಿ ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
--