ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜೆಡಿಎಸ್ ವಿಪ್: ಸದಸ್ಯರಿಗೆ ತಲೆನೋವು

Mainashree
Updated On : 20 Mar 2014, 12:14 pm

ಕುಣಿಗಲ್: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ಜೆಡಿಎಸ್ ವಿಪ್ ಜಾರಿ ಮಾಡಿದರೆ ಅದನ್ನು ಹೇಗೆ ಪರಿಗಣಿಸಬೇಕೆಂಬುದು ಸದಸ್ಯರಿಗೆ ತಲೆ ನೋವಾಗಿ ಪರಿಣಮಿಸಿದೆ.
ಕಾರಣ, ಕಳೆದ ಪುರಸಭೆ ಚುನಾವಣೆಯಲ್ಲಿ ತಾಲೂಕು ಜೆಡಿಎಸ್ ಎರಡು ಭಾಗವಾಗಿ ಚುನಾವಣೆ ಎದುರಿಸಿದ್ದು ಅಧಿಕೃತ ಮತ್ತು ಬಂಡಾಯ ಜೆಡಿಎಸ್ ಎಂದು ಸ್ಪರ್ಧಿಸಿತ್ತು. ಅಂದು ಬಂಡಾಯ ಅಭ್ಯರ್ಥಿಗಳಾಗಿ ಸ್ವತಃ  ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್. ಹರೀಶ್ ಸ್ಪರ್ಧಿಸಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈಗ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಗಾದಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಅಧಿಕೃತ ಅಭ್ಯರ್ಥಿಗಳು ಇದರಿಂದ ಅಸಮಾಧಾನಗೊಂಡಿದ್ದಾರೆ. ಆದರೆ ಪಕ್ಷದ ಅಧಿಕೃತ ಅಭ್ಯರ್ಥಿಗಳು ಚುನಾವಣೆಯಲ್ಲಿ ವರಸೆ ಬದಲಿಸಿದಂತೆ ವಿಪ್ ಜಾರಿ ಮಾಡುವುದು ಪಕ್ಷಗಳ ಸಂಪ್ರದಾಯ.
ಆದರೆ ಬಂಡಾಯವಾಗಿ ಸ್ಪರ್ಧಿಸಿದ್ದ ತಾಲೂಕು ಅಧ್ಯಕ್ಷರು ಹೇಗೆ ವಿಪ್ ಜಾರಿ ಮಾಡುತ್ತಾರೆ, ಮಾಡಿದರೂ ಮಾನ್ಯತೆ ಇರುತ್ತದೆಯೇ ಎಂದು ಕೆಲ ಸದಸ್ಯರು ಪ್ರಶ್ನಿಸುತ್ತಿದ್ದರೆ, ಇನ್ನು ಅಧ್ಯಕ್ಷ ಗಾದಿಯ ಆಕಾಂಕ್ಷಿಗಳಾಗಿರುವ ಅಧಿಕೃತ ಅಭ್ಯರ್ಥಿಗಳಾದ ಚಂದ್ರಶೇಖರ್, ಪಾಪಣ್ಣ ಅ.ಕೆಂಪಣ್ಣ ಅವರು ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬದಲು ತಮಗೆ ಅವಕಾಶ ಕಲ್ಪಿಸುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷ ಗಾದಿಗೂ ಅಧಿಕೃತ ಅಭ್ಯರ್ಥಿಯಾದ ಸಮೀವುಲ್ಲಾ, ಇತರರು ಮನವಿ ಸಲ್ಲಿಸಿದ್ದಾರೆ.
ತಾಲೂಕು ಜೆಡಿಎಸ್ ಅಂದಿನ ಬಂಡಾಯ ಮತ್ತು ಮೂಲ ಸದಸ್ಯರ ನಡುವಿನ ಅಧಿಕಾರ ಹಂಚಿಕೆಯ ಸೂತ್ರ ಸಿದ್ಧಡಿಸಿ ಅಂತಿಮಗೊಳಿಸುವುದು ಕಷ್ಟದ ಕೆಲಸವಾಗಿದ್ದು, ಪಕ್ಷದಲ್ಲಿ ಅದೂ ಲೋಕಸಭೆ ಚುನಾವಣೆ ವೇಳೆಯಲ್ಲಿ ಬಂಡಾಯಕ್ಕೆ ಆಸ್ಪದ ಇಲ್ಲದಂತೆ ಪಕ್ಷದ ವರಿಷ್ಠರು ಎಷ್ಟರ ಮಟ್ಟಿಗೆ ಎಲ್ಲರನ್ನು ಸರಿದೂಗಿಸುವರೆಂಬ ಕುತೂಹಲ ನಾಗರಿಕರನ್ನು ಕಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement