ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 20 Mar 2014, 12:15 pm

ಇಂದು ಸಂಕಷ್ಟಹರದ ಪ್ರಯುಕ್ತ ವಿಶೇಷ ಪೂಜಾಕಾರ್ಯ
ಹುಳಿಯಾರು: ಹೋಬಳಿ ಪ್ರಸಿದ್ಧ ಶ್ರೀಗಣೇಶ ದೇವಾಲಯ ಹಾಗೂ ಬಳ್ಳೆಕಟ್ಟೆಯ ನೂತನ ವಿನಾಯಕ ದೇವಾಲಯದಲ್ಲಿ  ಗುರುವಾರ ಸಂಕಷ್ಟಹರ ಚತುರ್ಥಿ ಅಂಗವಾಗಿ ಸ್ವಾಮಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯ  ಸೇರಿದಂತೆ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.
ಬಿಎಸ್ಸೆನ್ನೆಲ್
ಗ್ರಾಹಕರಿಗೆ ಭಾರಿ ಕಿರಿಕಿರಿ
ಕುಣಿಗಲ್: ಪಟ್ಟಣದಲ್ಲಿ ಸಮರ್ಪಕ ದೂರವಾಣಿ ಸೇವೆ ಒದಗಿಸುವಲ್ಲಿ ಸ್ಥಳೀಯ ಸಿಬ್ಬಂದಿ ವಿಫಲವಾಗಿದ್ದು, ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಕೂಡಲೇ ಅಗತ್ಯ ಕ್ರಮ ಕೈಗೊಂಡು ತ್ವರಿತ ಮತ್ತು ಸಮರ್ಪಕ ಸೇವೆ ಒದಗಿಸುವಂತೆ ನಾಗರಿಕರು ಮತ್ತು ಗ್ರಾಹಕರು ಆಗ್ರಹಿಸಿದ್ದಾರೆ. ಕಾಲ ಕಳೆದಂತೆಲ್ಲಾ ದೂರವಾಣಿ ಗ್ರಾಹಕರು ಇಂಟರ್‌ನೆಟ್ ಬಳಕೆ ಹೆಚ್ಚುತ್ತಿದೆ. ಆದರೆ ಪಟ್ಟಣದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಗ್ರಾಹಕರ ಪಾಡಂತೂ ಹೇಳತೀರದಾಗಿದೆ. ಲೈನ್ ನಿರ್ವಹಣೆ ಸಮಸ್ಯೆಯಾದಲ್ಲಿ ದೂರು ನೀಡುವ ನಂಬರ್‌ಗೆ ಕರೆಮಾಡಿದರೂ ಯಾವುದೇ ತಾಂತ್ರಿಕ ಸಿಬ್ಬಂದಿ ಸ್ಪಂದಿಸುವುದಿಲ್ಲ. ಇನ್ನು, ಸ್ಥಳೀಯ ವಿನಿಮಯ ಕೇಂದ್ರವೂ ಗ್ರಾಹಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಗ್ರಾಹಕರ ಯಾವುದೇ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವುದಿಲ್ಲ. ದೊಡ್ಡಪೇಟೆ ಬಿಎಂ ರಸ್ತೆಯ ಸುತ್ತಮುತ್ತಲ ಪ್ರದೇಶದಲ್ಲಿ ದೂರವಾಣಿ ಮಾರ್ಗ ಕೆಟ್ಟು ಸುಮಾರು ಎಂಟರಿದ ಹತ್ತು ದಿನಗಳೇ ಕಳೆದಿದ್ದು, ಈ ಬಗ್ಗೆ ಗ್ರಾಹಕರೆ ವಿನಿಮಯ ಕೇಂದ್ರಕ್ಕೆ ಹೋಗಿ ದೂರುದಾಖಲಿಸಿದ್ದರೂ ಸಿಬ್ಬಂದಿ ಕುಂಟುನೆಪ ಹೇಳಿಕೊಂಡು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಹಕ ಮಂಜುನಾಥ ಆರೋಪಿಸಿದ್ದಾರೆ. ತ್ವರಿತ ಮತ್ತು ಸಮರ್ಪಕ ಸೇವೆ ನೀಡದ ಕಾರಣ ಬಹುತೇಕ ಗ್ರಾಹಕರು ಬಿಎಸ್‌ಎನ್‌ಎಲ್‌ನಿಂದ ವಿಮುಖರಾಗಿದ್ದಾರೆ ಎಂದರು.
ಅನುಮಾನಾಸ್ಪದ ಸಾವು
ತುರುವೇಕೆರೆ: ತಾಲೂಕಿನ ಸಂಗಲಾಪುರ ಗೇಟ್ ಬಳಿ ವ್ಯಕ್ತಿಯೋರ್ವರು ಅನುಮಾನಾಸ್ಪದ ರೀತಿಯಲ್ಲಿ ಮೃತ ಹೊಂದಿರುವ ಪ್ರಕರಣ ವರದಿಯಾಗಿದೆ. ಸಂಗಲಾಪುರ ಗ್ರಾಮದ ನಿವಾಸಿ ಶಿವರಾಮಯ್ಯ (50) ನವರು ಮೃತರಾಗಿದ್ದು ಶವದ ಕಿವಿ ಮತ್ತು ಮೂಗಿನಿಂದ ರಕ್ತ ಸೋರಿಕೆಯಾಗಿದೆ. ಶಿವರಾಮಯ್ಯನವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾನೆ. ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಶಿವರಾಮಯ್ಯ ಮನೆಗೆ ಸರಿಯಾಗಿ ಹೋಗುತ್ತಿರಲಿಲ್ಲ ಎಂದು ಹೇಳಲಾಗಿದೆ. ಮೃತ ಸಹೋದರ ತಾತಯ್ಯ ನೀಡಿರುವ ದೂರಿನನ್ವಯ ಅನುಮಾನಾಸ್ಪದ ಸಾವು ಪ್ರಕರಣ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಸಿಪಿಐ ಕೃಷ್ಣಕುಮಾರ್, ಎಸೈ ರಾಚಯ್ಯ ಭೇಟಿ ನೀಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement