ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೇಶಕ್ಕೆ ನರೇಂದ್ರ ಮೋದಿ ಆಡಳಿತ ಅಗತ್ಯ

Mainashree
Updated On : 20 Mar 2014, 11:45 am

ಶಿರಾ: ಈ ದೇಶಕ್ಕೆ ನರೇಂದ್ರಮೋದಿಯವರ ಆಡಳಿತ ಅಗತ್ಯವಾಗಿದ್ದು ಅವರು ಪ್ರದಾನಮಂತ್ರಿಯಾಗಬೇಕು.
ನನ್ನ ಅವಧಿಯಲ್ಲಿ ಭದ್ರಮೇಲ್ದಂಡೆ ಯೋಜನೆ, ರೇಲ್ವೆಯಂತಹ ಅನೇಕ ಜನಪರ ಕಾರ್ಯಗಳು ನನ್ನ ಕ್ಷೇತ್ರಕ್ಕೆ ಆಗಿವೆ ಎಂದು ಸಂಸದರಾದ ಜನಾರ್ದನಸ್ವಾಮಿ ತಿಳಿಸಿದರು.
ಅವರು ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಚಿತ್ರದುರ್ಗ ಲೋಕಸಭಾ ಹಿನ್ನೆಲೆಯಲ್ಲಿ ನಡೆದ  ಚುನಾವಣ ಪ್ರಚಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಿವಪ್ರಸಾದ್ ಮಾತನಾಡುತ್ತಾ ಕೇಂದ್ರ ಸರ್ಕಾರದ ಹಗರಣಗಳಿಂದ ಜನರು ಬೇಸತ್ತು ಹೋಗಿದ್ದಾರೆ. ಈ ದೇಶಕ್ಕೆ ಮೋದಿಯವರು ಪ್ರಧಾನಿಯಾಗಬೇಕೆಂದು ತಿಳಿಸಿದರು. ಬಿ.ಕೆ.ಮಂಜುನಾಥ್ ಅವರು ಕಾಂಗ್ರೆಸ್ ಹಾಗೂ ನಾಯಕರಿಂದ ಈ ದೇಶ ಅಭಿವೃದ್ಧಿ ಹೊಂದುವುದಿಲ್ಲ ಎಂದರು.
 ಬಿ.ಜೆ.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಬಿ.ಕೆ. ಮಂಜುನಾಥ್, ತಾಲೂಕು ಅಧ್ಯಕ್ಷರಾದ ಬಸವರಾಜು ಹಾಗೂ ಜಿಲ್ಲಾ ಸಂಚಾಲಕರಾದ ಸಿ. ಮಾಲಿಮರಿಯಪ್ಪ ನಗರಾಧ್ಯಕ್ಷರಾದ ನಟರಾಜಾಚಾರ್ ಹಾಗೂ ಎಲ್ಲಾ ಮೋರ್ಚಗಳ ಅಧ್ಯಕ್ಷರು ಕಾರ್ಯದರ್ಶಿಗಳು, ಕಾರ್ಯಕರ್ತರು ಹಾಜರಿದ್ದರು,
ಈ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಅನೇಕರು ಬಿಜೆಪಿಗೆ ಸೇರ್ಪಡೆಯಾದರು. ಹನುಮಂತರಾಯಪ್ಪ, ತೋಪಯ್ಯ ಹಾಗೂ ರಾಜಣ್ಣ ಉದ್ದಯ್ಯನ ಪಾಳ್ಯ ಸಂಗಮೇಶ್, ಲೋಕೇಶ್ ಬಾಲೇನಹಳ್ಳಿ ಮತ್ತಿತರರು ಹಾಜರಿದ್ದರು. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ರಂಗಸ್ವಾಮಿ ಸ್ವಾಗತಿಸಿದರು.  ಮಾಲಿಮರಿಯಪ್ಪ ನಿರೂಪಿಸಿದರು. ಕರಿಯಣ್ಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement