ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಕಲ ಜೀವರಾಶಿಗೂ ಲೇಸನ್ನೇ ಬಯಸಿದ ಸಿದ್ಧರಾಮ: ಸುರೇಶ್

Mainashree
Updated On : 21 Mar 2014, 11:30 am

ತುಮಕೂರು: ಯಾವುದೇ ವ್ಯಕ್ತಿ ಸಮಾಜದ ಒಳಿತಿಗಾಗಿ ನಿಸ್ವಾರ್ಥ ಭಾವನೆಯಿಂದ ಕರ್ಮ ಮತ್ತು ಜ್ಞಾನ ಮಾರ್ಗದಲ್ಲಿ ಸಕಲ ಜೀವರಾಶಿಗಳಿಗೂ ಲೇಸನೇ ಬಯಸಿ ಅಸಾಧಾರಣ ಸಾಧನೆಗೈದು ಪವಾಡ ಪುರುಷನೆನಿಸಿಕೊಳ್ಳುತ್ತಾರೆ ಎಂದು ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ನಿರ್ದೇಶಕ ಸುರೇಶ್ ಆನಗಳ್ಳಿ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ  ಸೊನ್ನಲಿಗೆ ಸಿದ್ಧರಾಮ  ನಾಟಕ ಉದ್ಘಾಟಿಸಿ ಮಾತನಾಡಿದರು.
ರಾಘವಾಂಕನ ಸಿದ್ಧರಾಮಚರಿತೆಯಲ್ಲಿ 68 ಸಹಸ್ರ ವಚನಗಳನ್ನು ಹಾಡಿ, ಹಾಡಿ ನಲಿದಿದ್ದೇನೆ ಎಂದು ಸ್ವತಃ ಸಿದ್ಧರಾಮರೇ ಹೇಳಿದ್ದಾರೆ. ಆದರೆ ಇಂದು ನಮಗೆ 1679 ವಚನಗಳು ಮಾತ್ರ ಲಭ್ಯವಿದ್ದು ಸಿದ್ಧರಾಮರ
ಬದುಕು, ವ್ಯಕ್ತಿತ್ವ, ಅನುಭಾವದ ಕಾಯಕ ತತ್ವಗಳು ಸರ್ವಕಾಲಿಕ ಸತ್ಯವಾಗಿದ್ದು, 12 ನೇ ಶತಮಾನದಲ್ಲಿಯೇ ಜನಮುಖಿಯಾಗಿ, ಕೆರೆ, ಬಾವಿ, ಛತ್ರ, ರಸ್ತೆ ಮುಂತಾದ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಜನಸಾಮಾನ್ಯರಲ್ಲಿ ದೈವತ್ವ ಪಡೆದಿದ್ದಾರೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಎನ್. ನಾಗಪ್ಪ ತಿಳಿಸಿದರು.
ಪವಾಡ ರಹಸ್ಯ ಬಯಲು: ಸಿದ್ದರಾಮರ ಆದರ್ಶ, ನಿಸ್ವಾರ್ಥಪರತೆ, ಕಾಯಕ ನಿಷ್ಠೆ ಸಮಾಜ ಸೇವೆಗಳನ್ನು ವೈಭವೀಕರಿಸಿ ಪವಾಡ ಪುರುಷನೆಂದು ಕರೆಯುತ್ತಿದ್ದ ಜನರಿಗೆ ಸ್ವತಃ ಸಿದ್ಧರಾಮರೇ ಪವಾಡ ರಹಸ್ಯ ಬಯಲು ಮಾಡಿದ ಸನ್ನಿವೇಶಗಳು, ಸಾಮೂಹಿಕ ವಿವಾಹ, ಜಾತಿಪದ್ಧತಿ, ಸಾಮರಸ್ಯ, ಸಹಬಾಳ್ವೆ, ವಿಶ್ವವಿದ್ಯಾನಿಲಯಗಳ ಸ್ಥಾಪನೆ ಮಾಡಿದ ಸಿದ್ಧರಾಮರ ವೈಚಾರಿಕತೆ ಪ್ರಗತಿಪರ ನಿಲವುಗಳನ್ನು ನಾಟಕಕ್ಕೆ ರೂಪಾಂತರಿಸಿದ ತುಮಕೂರು ಶಿವಕುಮಾರರ ಈ ಕಾರ್ಯ ಶ್ಲಾಘನೀಯವೆಂದು ಲೇಖಕಿ ಶಾಂತಾಕಂಪಾರಳ್ಳಿಯವರು ಅಭಿಪ್ರಾಯ ಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಟಿ. ಮುನಿರಾಜಯ್ಯನವರು ಅಧ್ಯಕ್ಷತೆ ವಹಿಸಿದ್ದು, ವಚನಕಾರರಲ್ಲೇ ವಿಶಿಷ್ಟ ಛಾಪು ಮೂಡಿಸಿದ್ದ ಸಿದ್ಧರಾಮರ ಬದುಕನ್ನು ಈ ಸಮಾಜಕ್ಕೆ ಹತ್ತಿರಿದಿಂದ ತಿಳಿಸುವ ಪ್ರಯತ್ನವಾಗಿ ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ಇತ್ತು ಅಲ್ಲಿನ ಜನಸಮುದಾಯ, ವಿದ್ವಾಂಸರು, ಗ್ರಂಥಗಳನ್ನು ಅಧ್ಯಯನ ಮಾಡಿದ. ಶಿವಕುಮಾರ್ ಒಂದು ಒಳ್ಳೆಯ ನಾಟಕವನ್ನು ಈ ಸಮಾಜಕ್ಕೆ ನೀಡಿದ್ದಾರೆ.
ಆಭಾರಿಯಾಗಬೇಕು: ಹಾಗೆಯೇ ರೂಪಾಶಿವಕುಮಾರ್ ಈ ನಾಟಕದ ಹೊಣೆ ಹೊತ್ತು ಯಶಸ್ವಿಯಾಗಿ ಮೂರು ಪ್ರಯೋಗಗಳನ್ನು ನಡೆಸಿ ಮುನ್ನಡೆಯುತ್ತಿದ್ದು ಇಡೀ ಕುಟುಂಬ ಕಲಾಸೇವೆಗೆ ತೊಡಗಿಸಿಕೊಂಡಿರುವುದಕ್ಕೆ ನಾವು ಆಭಾರಿಯಾಗಿರಬೇಕಾಗುತ್ತದೆ ಎಂದು ತಿಳಿಸಿದರು.ಅಲ್ಲದೆ ನಾಟಕವನ್ನು ಯುವ ನಿರ್ದೇಶಕ ಯು. ಗೋವಿಂದೇಗೌಡರು ಸಮರ್ಥವಾಗಿ ನಿರ್ವಹಿಸಿದ್ದು ಕಲಾ ತಂಡದ ಎಲ್ಲಾ ಕಲಾವಿದರು ಯಶಸ್ವಿಯಾಗಿ ಪ್ರಯೋಗಗಳನ್ನು ನೀಡುತ್ತಿದ್ದು ಶ್ರೀಸಿದ್ಧರಾಮರ ಆದರ್ಶ ಜೀವನ ಸಮಾಜದ ಒಳಿತಿಗೆ ಕೈಗನ್ನಡಿಯಾಗಬೇಕೆಂದು ಆಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement