ಸಾಮಾಜಿಕ ಸಂದೇಶ ಸಾರುವ ನಾಟಕ 'ಎರಡು ನಾಯಿಗಳು'
ತುಮಕೂರು: ತಲ್ಲಣಗಳಿಂದ ಹೊರಬರಲು ನಾಟಕ ಸಹಕಾರಿ ಎಂದು ರಂಗಭೂಮಿ ಕಲಾವಿದ ಎಚ್. ಎಸ್. ರಾಜಶೇಖರಮೂರ್ತಿ ಅಭಿಪ್ರಾಯಪಟ್ಟರು.
ಅವರು ಶ್ರೀ ರಂಗರಂಗವು ಗುಬ್ಬಿ ತಾಲೂಕು ಹೊಸಕೆರೆಯಲ್ಲಿ ಏರ್ಪಡಿಸಿದ್ದ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಮಾಜಿಕ ಅಸಮತೋಲನದ ಬಗ್ಗೆ, ಮನುಷ್ಯನನ್ನು ಮನುಷ್ಯನನ್ನಾಗಿ ನೋಡದ ಮನುಷ್ಯ ಸಂಬಂಧಗಳ ಬಗ್ಗೆ, ಒಟ್ಟು ಜನ ಸಮುದಾಯಗಳ ಲಯಗಳನ್ನು ಒಟ್ಟುಗೂಡಿಸಲು ರಂಗ ಪ್ರಯೋಗ ಸಹಕಾರಿ ಎಂದರು.
ನಾವು ಎಷ್ಟೇ ಜಾಗೃತರಾಗಿದ್ದರೂ ಪ್ರತಿ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗಳಿಗೆ ಒಳಗಾಗಿರುತ್ತಾನೆ ಎನ್ನುವ ವಿಷಯವನ್ನು ಈಚನೂರರ ನಾಟಕ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದೆ. ವಿಚಾರವಂತರು, ಪ್ರಬುದ್ಧರು, ಬುದ್ಧಿಜೀವಿಗಳಿಗೆ ಅರ್ಥವಾಗುವ ಭಾಷೆ ಅನಿಸಿದರೂ, ಸಾಮಾನ್ಯರೂ ಸುಲಲಿತವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ನುಡಿದರು.
ಇಂಥ ನಾಟಕಗಳು ಇವತ್ತಿನ ಸಮಾಜಕ್ಕೆ ಅನಿವಾರ್ಯ. ರಂಗಯ್ಯನವರಿಗೆ ಬೆಂಬಲ ಬೇಕಾಗಿದೆ. ಹೆಚ್ಚು ಪ್ರದರ್ಶನಗಳನ್ನು ಕಾಣಬೇಕಾಗುತ್ತದೆ ಎಂದರು.
ಮುಖ್ಯ ಅಥಿಗಳಾಗಿ ಹಿರಿಯ ಕಲಾವಿದ ಎಚ್. ಸಿ. ನರಸಿಂಹಮೂರ್ತಿ, ಉಪಾಧ್ಯಾಯ ಮಲ್ಲಯ್ಯ, ನಿರ್ದೇಶಕ ಎಚ್. ಎಂ. ರಂಗಯ್ಯ ಮುಂತಾದವರು ಇದ್ದರು.