ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಪರ್ಧೆ ಅವಕಾಶ ವಂಚಿತ ಮಹಿಳೆ

Mainashree
Updated On : 21 Mar 2014, 11:31 am

ತುಮಕೂರು: ಚುನಾವಣೆಯಲ್ಲಿ ಕೆಲವೇ ಕೆಲವು ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುತ್ತಿದೆ ಎಂದು ಜಿಲ್ಲಾ ಮಹಿಳಾ ಸಂರಕ್ಷಣಾ ವೇದಿಕೆ ಅಧ್ಯಕ್ಷೆ ತಾಹೆರಾ ಕುಲ್ಸುಂ ವಿಷಾದಿಸಿದರು.
ಅವರು ತುಮಕೂರು ಜಿಲ್ಲಾ ಮಹಿಳಾ ಸಂರಕ್ಷಣಾ ವೇದಿಕೆ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರಿಗೆ ಎಲ್ಲ ರಂಗದಲ್ಲೂ ಶೇ. 50 ರಷ್ಟು ಮೀಸಲು ನೀಡುವುದಾಗಿ ಹೇಳಲಾಗುತ್ತಿದೆಯೇ ವಿನಃ, ಆಶ್ವಾಸನೆಗಳು ಈಡೇರುತ್ತಿಲ್ಲ. ಸಂಘ, ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸಿಗಬೇಕಾದ ಸ್ಥಾನ-ಮಾನಗಳು ಸಿಗುತ್ತಿಲ್ಲ.
ಸರ್ಕಾರಿ ಸವಲತ್ತುಗಳು ಮಹಿಳೆಯರಿಗೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ಜಾತಿ, ಜನಾಂಗದ ಮಹಿಳೆಯರು ಒಗ್ಗಟ್ಟಾಗಿ ಹೋರಾಡಿದಲ್ಲಿ ಮಾತ್ರ, ಸವಲತ್ತುಗಳನ್ನು ಪಡೆಯಲು ಸಾಧ್ಯ. ಇಲ್ಲವಾದಲ್ಲಿ ಮಹಿಳೆಯರಿಗೆ ಯಾವ ಸ್ಥಾನ-ಮಾನಗಳು ಸಿಗಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದು ಮಾರ್ಮಿಕವಾಗಿ ನುಡಿದರು. ಸಂಘದ ಕಾರ್ಯದರ್ಶಿ ಜಯಶ್ರೀ ಮಾತನಾಡಿ, ಭಾರತದಲ್ಲಿ ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯ ದೊರೆತಿಲ್ಲ. ಮಹಿಳೆಯರನ್ನು ಕೇವಲ ಚುನಾವಣೆ ಸಂಘ - ಸಂಸ್ಥೆಗಳ ಕಾರ್ಯಕ್ರಮಗಳಿಗಷ್ಟೇ ಬಳಸಿಕೊಂಡು, ನಂತರ ಕಡೆಗಣಿಸಲಾಗುತ್ತಿದೆ ಎಂದು ದೂರಿದರು.
ಸಭೆಯಲ್ಲಿ ನಿರ್ದೇಶಕರಾದ ಗೀತಾ ಜಿನೇಂದ್ರ, ಸಿ. ಮಂಜುಳಾ, ಗಿರಿಜಮ್ಮ ಮಲ್ಲಸಂದ್ರ, ಹಸೀನಾ, ರಶೀದಾ, ಮೊಹ್ಸೀನಾ, ಭಾಗ್ಯಲಕ್ಷ್ಮಿ, ಗಂಗಾ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement