ಮೊರಾರ್ಜಿ ವಸತಿ ಶಾಲೆ ಪ್ರವೇಶ ಪರೀಕ್ಷೆ
ಚಿಕ್ಕನಾಯಕನಹಳ್ಳಿ: 2014-15ನೇ ಸಾಲಿನ ಮೊರಾರ್ಜಿ ವಸತಿ ಶಾಲೆ ಪ್ರವೇಶಕ್ಕಾಗಿ ಪರೀಕ್ಷೆಗಳನ್ನು ಭಾನುವಾರನಡೆಸಲಾಯಿತು. ತಾಲೂಕಿನಲ್ಲಿ ಬಾಲಕ ಮತ್ತು ಬಾಲಕಿಯರು ಸೇರಿ ಒಟ್ಟು 1019 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಜಿಲ್ಲೆಯ ಚಿ.ನಾ.ಹಳ್ಳಿ, ಶಿರಾ, ಪಾವಗಡ ಬಿಟ್ಟರೆ ಉಳಿದ ತಾಲೂಕುಗಳಿಂದ ಪರೀಕ್ಷೆಗೆ ಕುಳಿತವರ ಸಂಖ್ಯೆ ಕಡಿಮೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಕುಳಿತವರು ಸುಮಾರು 7000 ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.