ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

28ರಂದು ಕಾಂಗ್ರೆಸ್ ಸೇರ್ಪಡೆ: ಕೃಷ್ಣಯ್ಯ ಶೆಟ್ಟಿ

Rashmi Kasaragodu
Updated On : 25 Mar 2014, 1:33 am

ಮಾಲೂರು: ಕಾಂಗ್ರೆಸ್ ಸೇರಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಮಾ.28ರಂದು ಅಧಿಕೃತವಾಗಿ ಪಕ್ಷ ಸೇರುತ್ತಿದ್ದೇನೆ ಎಂದು ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಹೇಳಿದರು.
ಇಲ್ಲಿನ ವೈಟ್ ಗಾರ್ಡ್‌ನ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಮ್ಮ ಬೆಂಬಲಿಗ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, 'ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಈಗಾಗಲೇ ಹೂವಿನ ಹಾರ ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಕ್ಷೇತ್ರದ ಜನತೆ ಎದುರು ನಡೆಯುವ ಕಾರ್ಯಕ್ರಮದಲ್ಲಿ ಸೇರ್ಪೆಡೆಯಾಗಬೇಕೆಂಬ ನನ್ನ ಆಸೆ. ಇದಕ್ಕೆ ಸ್ಪಂದಿಸಿರುವ ಅವರು ಮಾ. 28 ರಂದು ಪಟ್ಟಣದಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸೇರ್ಪೆಡೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅಂದು 25 ಸಾವಿರಕ್ಕೂ ಹೆಚ್ಚು ಜನರು ಸೇರಬೇಕು' ಎಂದು ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿದರು.
ಕಷ್ಟದ ಸಂದರ್ಭದಲ್ಲಿ ನನ್ನ ಕೈ ಹಿಡಿದಿದ್ದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರು. ಹಾಗಾಗಿ ಅವರನ್ನು ಗೆಲ್ಲಿಸುವುದು ನನ್ನ ಬೆಂಬಲಿಗರ ಕರ್ತವ್ಯವಾಗಬೇಕು. ಅದಕ್ಕಾಗಿ ಶ್ರಮಿಸಬೇಕು ಎಂದು ಅವರು ಹೇಳಿದರು.
ತಾಪಂ ಸದಸ್ಯರಾದ ಪುಟ್ಟಸ್ವಾಮಿ, ಲೋಕೇಶ್, ಚಂದ್ರಪ್ಪ, ಕೃಷ್ಣಪ್ಪ, ಪಾರ್ವತಮ್ಮ, ಅಮರಾವತಿ, ಜಿಪಂ ಸದಸ್ಯೆ ಯಲ್ಲಮ್ಮ, ಅಶ್ವತ್ಥ ರೆಡ್ಡಿ, ಮಧುಸೂದನ್, ಭಾವನಹಳ್ಳಿ ಚಂದ್ರು, ರಾಜೇಶ್, ಶಿವಣ್ಣ, ಗೌರಿಶಂಕರ್ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement