ಜಿಎಸ್‌ಬಿ ಸುಳ್ಳಿನ ಸರದಾರ: ಶಾಸಕ ಶ್ರೀನಿವಾಸ್ ಟೀಕೆ
ಚಿಕ್ಕನಾಯಕನಹಳ್ಳಿ: ಗ್ರಾಮಪಂಚಾಯ್ತಿಯಿಂದ ಹಿಡಿದು ವಿಧಾನಸಭೆಯವರೆಗೆ ನಮ್ಮ ಪಕ್ಷದ ಚುನಾಯಿತ ಸದಸ್ಯರಿದ್ದರೂ ಪ್ರತಿ ಬಾರಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋಲುತ್ತಿರುವುದು ವಿಷಾದದ ಸಂಗತಿ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ನುಡಿದರು.
ಅವರು ಸೋಮವಾರ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಜಾತ್ಯತೀತ ಜನತಾದಳದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಸಂಸದ ಜಿ.ಎಸ್.ಬಸವರಾಜು ಸುಳ್ಳಿನ ಸರದಾರ, ಅವರೊಬ್ಬ ಪೇಪರ್ ಹುಲಿ ಎಂದರು. ಕೃಷ್ಣಪ್ಪ ಸೋತರೆ ದೇವೇಗೌಡ ಸೋತಂತೆ, ಆದ್ದರಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿಯಿರಿ ಎಂದು ಅವರು ಕರೆ ನೀಡಿದರು.