ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತರಕಾರಿ ಸುರಿದು ಆಕ್ರೋಶ

Rashmi Kasaragodu
Updated On : 25 Mar 2014, 1:32 am

ಶಿರಾ: ಇಲ್ಲಿನ ನಗರಸಭೆ ಕಾರ್ಯಾಲಯದ ಮುಂದೆ ನಗರದ ತರಕಾರಿ ವ್ಯಾಪಾರಸ್ಥರು ತರಕಾರಿ ವ್ಯಾಪಾರಕ್ಕಾಗಿ  ಒಂದು ಕಡೆ ನಿರ್ದಿಷ್ಟ ಜಾಗ ಗುರುತಿಸಿ  ಎಂದು ಒತ್ತಾಯಿಸಿ ತರಕಾರಿ ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ನಗರದ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಮುಂದಿನ ಜಾಗದಲ್ಲಿ ತರಕಾರಿ ಮಾರುಕಟ್ಟೆ ನಡೆಯುತ್ತಿತ್ತು. ನಂತರ ಇಲ್ಲಿಂದ ತೆರವುಗೊಳಿಸಿದ ಮಾರಕಟ್ಟೆಯನ್ನು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಪಕ್ಕದ ರಾಮಕೃಷ್ಣ ನರ್ಸಿಂಗ್ ಹೋಂ ರಸ್ತೆಯಲ್ಲಿ ಬದಲಾಯಿಸಿದ್ದರು. ಮತ್ತೆ ಈಗ ಶುದ್ಧಗಂಗಾ ನೀರಿನ ಕೇಂದ್ರದ ಪಕ್ಕ ದಾರಿ ತೋರಿಸಿದ್ದು ಹೀಗೆ ಹಂಚಿ ಹರಿದು ಹೋಗಿರುವ ತರಕಾರಿ ವ್ಯಾಪಾರಿಗಳನ್ನು ಒಂದೆಡೆ ಕೂತು ವ್ಯಾಪಾರ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ. ತರಕಾರಿ ವ್ಯಾಪಾರಿಗಳಾದ ಪಾರ್ವತಮ್ಮ, ಭೂತಣ್ಣ, ಕೆಂಚಪ್ಪ, ಶಾರದಮ್ಮ, ರತ್ನಮ್ಮ, ಲೋಕಮ್ಮ, ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement