ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೊಡ್ಡಹಳ್ಳಿ ಗಡಿ ಪ್ರದೇಶದಲ್ಲಿ ಚೆಕ್ ಪೋಸ್ಟ್

Rashmi Kasaragodu
Updated On : 25 Mar 2014, 1:30 am

ಪಾವಗಡ: ಅಕ್ರಮ ವಸ್ತುಗಳ ಸಾಗಣಿಕೆ ಹಿನ್ನೆಲೆಯಲ್ಲಿ ತಾಲೂಕಿನ ದೊಡ್ಡಹಳ್ಳಿ ಗಡಿ ಪ್ರದೇಶದಲ್ಲಿ ಚೆಕ್ ಪೋಸ್ಟ್ ತೆರೆದಿದ್ದು ಈಗಾಗಲೇ 318 ವಾಹನಗಳ ತಪಾಸಣೆ ಮಾಡಿರುವುದಾಗಿ ಸ್ಟಾಟಿಕ್ ಸರ್ವೆ ಲೆನ್ಸ್ ಸ್ವ್ಕಾಡ್‌ನ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಆದ ತಾ.ಜಲಾನಯನ ಇಲಾಖೆ ಅಭಿವೃದ್ಧಿ ಅಧಿಕಾರಿ ಪುಟ್ಟರಂಗಪ್ಪ ತಿಳಿಸಿದರು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಏ.17ರಂದು ನಡೆಯುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ಅಯೋಗದ ಆದೇಶ ಹಾಗೂ ತಾಲೂಕು ಕಾನೂನು ಸುವ್ಯವಸ್ಥೆಯ ಉಸ್ತುವಾರಿದಾರರಾದ ತಹಸೀಲ್ದಾರ್ ಮಹಮ್ಮದ್ ಅಲ್ತಾಪ್ ಪಾಷ ಅವರ ಸಲಹೆಯಂತೆ ಗಡಿ ಪ್ರದೇಶವಾದ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು ಮಾ.19ರಿಂದ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಮಾಜಘಾತಕ ಚಟವಟಿಕೆ ಮತ್ತು ಅಕ್ರಮ ಮದ್ಯ ಸಾಗಣಿಕೆ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದು ಹಗಲು ಮತ್ತು ರಾತ್ರಿ ಪಾಳಿ ಸೇರಿದಂತೆ ಬಸ್, ಲಾರಿ ದ್ವಿಚಕ್ರ, ಟೆಂಪೋ ಹಾಗೂ ಇತರೆ 318ವಾಹನಗಳನ್ನು ಈಗಾಗಲೇ ತಪಾಸಣೆ ಮಾಡಲಾಗಿದೆ ಎಂದರು. ತಂಡದ ಸಿಬ್ಬಂದಿಗಳಾದ ಗ್ರಾಮಲೆಕ್ಕಿಗ ಓಬಣ್ಣ, ವಿಡಿಯೋ ಗ್ರಾಫರ್ ಪ್ರಕಾಶ್, ಗ್ರಾಪಂ ಪಿಡಿಒ ಚನ್ನಯ್ಯ, ಕಾರ್ಯದರ್ಶಿ ಅಕ್ಕಲಪ್ಪ, ಪಾಂಡುರಂಗಪ್ಪ, ಪೊಲೀಸ್ ಇಲಾಖೆಯ ಎಎಸ್‌ಐಗಳಾದ ಜಯಸಿಂಹರಾವ್, ಲಕ್ಷ್ಮಯ್ಯ ಹಾಗೂ ಪಿಸಿಗಳಾದ ಮಹಮ್ಮದ್ ದೊಸ್, ಹನುಮಂತಯ್ಯ ಪ್ರಸಾದ್, ವಸಂತ್‌ಕುಮಾರ್ ಇತರೆ ಸಿಬ್ಬಂದಿಯವರು ಪಾಳಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement