ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆಶೀರ್ವದಿಸಿ, ಇಲ್ಲವೆ ಒದೆಯರಿ

Rashmi Kasaragodu
Updated On : 26 Mar 2014, 1:15 am

ಚಿಕ್ಕನಾಯಕನಹಳ್ಳಿ: ಎಚ್.ಡಿ. ದೇವೇಗೌಡರನ್ನು ಮತ್ತೆ ಪ್ರಧಾನಮಂತ್ರಿ ಸ್ಥಾನದಲ್ಲಿ ಕಾಣಲು ಇದು ಕೊನೆಯ ಅವಕಾಶ. ಆದ್ದರಿಂದ ಕರ್ನಾಟಕದಿಂದ ಹತ್ತು ಜನ ಸಂಸದರನ್ನು ಆಯ್ಕೆಮಾಡಿ ಕಳುಹಿಸಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಎ.ಕೃಷ್ಣಪ್ಪ ಹೇಳಿದರು.
ಸೋಮವಾರ ಪಟ್ಟಣದ ಕನ್ನಡಸಂಘದ ವೇದಿಕೆಯಲ್ಲಿ ತಾಲೂಕು ಜೆಡಿಎಸ್ ಏರ್ಪಡಿಸಿದ್ದ  ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
10 ವರ್ಷಗಳ ಕಾಲ ಆಡಳಿತ ಮಾಡಿದ  ಕಾಂಗ್ರೆಸ್  ದೇಶವನ್ನು ದಿವಾಳಿ ಮಾಡಿದೆ. ನಲವತ್ತು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಸ್ವಚ್ಛ ರಾಜಕಾರಣ ಮಾಡಿದ ನನ್ನನ್ನು ನಿರ್ದಾಕ್ಷಿಣ್ಯವಾಗಿ ಒದ್ದು ಆಚೆ ನೂಕಿದೆ. ಈಗ ನಿಮ್ಮ ಬಳಿ ಬಂದು ಬಿದ್ದಿದ್ದೇನೆ. ಆಶೀರ್ವದಿಸಿ, ಇಲ್ಲವೇ ಒದೆಯಿರಿ ಎಂದರು.
ದೇವೇಗೌಡ ಅವರನ್ನು ಪ್ರಧಾನಿ ಮಾಡಿದರೆ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಒಂದೇ ವರ್ಷದಲ್ಲಿ ನಿವಾರಿಸುತ್ತೇನೆ. ಬೆಂಗಳೂರಿಗೆ ತಂದಿರುವ ನರ್ಮ್ ಯೋಜನೆಯಲ್ಲಿ 28 ಸಾವಿರ ಕೋಟಿ ತುಮಕೂರಿಗೆ ತಂದು ಹಾಕುವುದಕ್ಕೆ ನನ್ನ ಕೈಗೆ ಶಕ್ತಿ ನೀಡಿ. 4500 ಹಳ್ಳಿಗಳಿರುವ ಕ್ಷೇತ್ರದಲ್ಲಿ ಪ್ರತಿ ಊರಿಗೆ ಹೋಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಇಲ್ಲಿರುವ ಪ್ರತಿಯೊಬ್ಬರು ದೇವೇಗೌಡ, ಎ.ಕೃಷ್ಣಪ್ಪನಾಗಬೇಕು. ಚುನಾವಣೆಯನ್ನು ಗೆಲ್ಲಬೇಕು ಎಂದರು. ಶಾಸಕ ಸಿ.ಬಿ. ಸುರೇಶ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ಗುಬ್ಬಿ ಶಾಸಕ ಶ್ರೀನಿವಾಸ್, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ಜಿಪಂ ಉಪಾಧ್ಯಕ್ಷೆ ಜಾನಮ್ಮ,ಪುರಸಭೆ ಅಧ್ಯಕ್ಷೆ ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ. ಚದ್ರಶೇಖರ್, ಸಿ.ಎಂ.ರಂಗಸ್ವಾಮಿ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement