ಕಾಂಗ್ರೆಸಿಗೆ ಅಲ್ಪಸಂಖ್ಯಾತ ಮತಗಳು
ಹುಳಿಯಾರು: ಎಲ್ಲಾ ಪಕ್ಷಗಳೊಂದಿಗೆ ಹಂಚಿಹೋಗಿರುವ ಅಲ್ಪ ಸಂಖ್ಯಾತರ ಮತಗಳನ್ನು ಮರಳಿ ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಜಿಲ್ಲಾ ಕಾಂಗ್ರೆಸಿನ ಅಲ್ಪಸಂಖ್ಯಾತ ವಿಭಾಗದ ಕಾರ್ಯಕರ್ತರು ಹೆಚ್ಚು ಶ್ರಮಿಸಬೇಕೆಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಎಚ್.ಎಸ್. ರಹಮತುಲ್ಲಾಸಾಬ್ ಮನವಿ ಮಾಡಿದರು. ಹುಳಿಯಾರಿನಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಲ್ಪಸಂಖ್ಯಾತರ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಎಚ್ಚರವಹಿಸಬೇಕೆಂದರು. ಸಿ.ಕೆ. ಜಾಫರ್ ಷರೀಫ್ ಅವರು ಕಾಂಗ್ರೆಸ್ಸಿನಲ್ಲೇ ಉಳಿಯುತ್ತಿರುವುದರಿಂದ ಅಲ್ಪಸಂಖ್ಯಾತರಿಗೆ ಹೆಚ್ಚು ಬಲ ಬಂದಂತಾಗಿದೆ ಎಂದರು. ಸಭೆಯಲ್ಲಿ ಕಮಿಟಿ ಅಧ್ಯಕ್ಷ ಮುನಾವರ್ ಭಾಷ, ಮಹಮದ್ ಯೂನೂಸ್, ಅಮೀರ್, ಎಸ್.ಎಸ್.ಎಸ್ ಹಮೀದ್, ಡಿಶ್ ಷರೀಫ್, ರಹಮತ್ ಜುಬೇರ್, ಉಪಾಧ್ಯಕ್ಷೆ ಶಭಾನ ಬಾಣು ಇದ್ದರು.