ರಾಜಕೀಯ ಜಾಗೃತಿಗೆ ಪ್ರಚಾರಾಂದೋಲನ
ತುಮಕೂರು: ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತಾರಕ್ಷಣಾ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಸಭೆ ಸೇರಿ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದರು. ದೇಶದಲ್ಲಿ ವ್ಯಕ್ತಿಯಾದಾರಿತ ಪ್ರಚಾರಗಳು ಆಗುತ್ತಿದ್ದು ಜನರ ನೈಜ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಕಾರ್ಪೋರೇಟ್ ಕಂಪನಿಗಳಿಗೆ ಸಹಾಕಾರಿಯಾಗಿ ಆಳುವ ವರ್ಗಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು. ಆದ್ದರಿಂದ ಚುನಾವಣೆಯಲ್ಲಿ ಸಂವಿಧಾನದ ಸಮಾನತೆಯ ಆಶಯವನ್ನು ಈಡೇರಿಸುವಂತವರನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ಧಾರಿಯಾಗಬೇಕು. ಜಿಲ್ಲಾದ್ಯಂತ ಏಪ್ರಿಲ್ 2 ರಿಂದ 10 ರವರೆಗೆ ಪ್ರಚಾರಾಂದೋಲನ ಮಾಡಲು ತೀರ್ಮಾನಿಸಲಾಯಿತು.