ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಸಂಶೋಧನೆಗಳು ಸಮಾಜಮುಖಿಯಾಗಲಿ'

Rashmi Kasaragodu
Updated On : 26 Mar 2014, 1:17 am

ತುಮಕೂರು: ಸಂಶೋಧನೆಗಳು ಸಮಾಜಮುಖಿಯಾಗಿರಬೇಕು. ಎಲ್ಲಾ ಜ್ಞಾನಗಳ ಅಂತಿಮ ಗುರಿ ಜನಸಾಮಾನ್ಯನಿಗೆ  ತಲುಪುವುದು ಎಂದು ಕೇರಳದ ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ರಾಜನ್ ಗುರುಕ್ಕಲ್ ಅಭಿಪ್ರಾಯಪಟ್ಟರು.  ತುಮಕೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಸ್ಥಾಪನಾ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ಇಂದು ಅಂತರ್ ಶಿಸ್ತೀಯ ಹಾಗೂ ಬಹುಶಿಸ್ತೀಯ ಸಂಶೋಧನೆಗಳು ಹೆಚ್ಚಾಗಬೇಕಾಗಿದೆ. ಅಷ್ಟೇ ಅಲ್ಲದೆ ಸ್ಥಳೀಯ ಭಾಷೆಯಲ್ಲಿ ಗಣಿತ, ರಸಾಯನಶಾಸ್ತ್ರ ಮುಂತಾದ ವಿಷಯಗಳ ಜ್ಞಾನ ಸ್ಥಳೀಯ ಭಾಷೆಯಲ್ಲಿ ದೊರೆಯಬೇಕು. ನಮ್ಮ ಭವಿಷ್ಯದ ವಿಜ್ಞಾನಿಗಳು ಹಳ್ಳಿಗಳಲ್ಲಿ ದೊರೆಯುವಂತಾಗಬೇಕು. ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಎಲ್ಲಾ ಶಿಸ್ತುಗಳ ಸಂಶೋಧನೆಗಳು ಸಮಾಜಮುಖಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement