ಅಧಿಕಾರಿಗಳ ನಿರ್ಲಕ್ಷ್ಯ; ನೀಡದ ವಾಹನ ಬಾಡಿಗೆ
ಕುಣಿಗಲ್: ಕಳೆದ ವಿಧಾನಸಭೆ ಚುನಾವಣೆಗೆ ವಾಹನಗಳನ್ನು ಪೂರೈಸಿದ್ದ ಖಾಸಗಿ ಶಾಲೆ, ವಿದ್ಯಾಸಂಸ್ಥೆಗಳಿಗೆ ಚುನಾವಣೆ ಮುಗಿದು ುಮಾರು ಹನ್ನೊಂದು ತಿಂಗಳು ಕಳೆದರೂ, ತಾಲೂಕು ಕಚೇರಿ ಸಿಬ್ಬಂದಿ ಹಣ ಪಾವತಿಸದ ಕಾರಣ ಈ ಬಾರಿ ಚುನಾವಣೆಗೆ ವಾಹನ ಕಳಿಸಲು ಮೀನಮೇಷ ಎಣಿಸುವಂತಾಗಿದೆ.
ವಿಧಾನಸಭೆ ಚುನಾವಣೆಗೆ ಪಟ್ಟಣದ ವಿವಿಧ ಖಾಸಗಿ ಶಾಲೆಗಳು, ವಿದ್ಯಾ ಸಂಸ್ಥೆಗಳು ತಮ್ಮ ವಾಹನಗಳನ್ನು ಚುನಾವಣೆ ಕಾರ್ಯಕ್ಕೆ ಸಹಕರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕೋರಿಕೆ ಮೇರೆಗೆ ವಾಹನಗಳನ್ನು ಕಳುಹಿಸಿದ್ದರು, ಇದಕ್ಕೆ ಸಂಬಂಧಿಸಿ ವಾಹನ ಇಂಧನ ಭತ್ಯೆ ಇತರೆ ಭತ್ಯೆಗಳನ್ನು ಚುನಾವಣೆ ವೆಚ್ಚದಲ್ಲಿ ಸೇರಿಸಿ ಈಗಾಗಲೆ ನೀಡಿದ್ದರೂ ತಾಲೂಕು ಕಚೇರಿ ಸಿಬ್ಬಂದಿ ನೀಡದ ಕಾರಣ, ಪ್ರಸಕ್ತ ಲೋಕಸಭೆ ಚುನಾವಣೆಗೆ ಸಾರಿಗೆ ಅಧಿಕಾರಿಗಳು ವಿದ್ಯಾ ಸಂಸ್ಥೆಗಳಿಗೆ ಮನವಿ ಮಾಡಿದಾಗ, ಸಂಸ್ಥೆ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದು ಅಧಿಕಾರಿಗಳಿಗೆ ತಲೆನೋವಿನ ಸಂಗತಿಯಾಗಿದೆ. ಕ್ರಮ ಕೈಗೊಳ್ಳ ಬೇಕೆಂದು ಶಾಲೆಗಳ ಮುಖ್ಯಸ್ಥರು ಮನವಿ ಮಾಡಿದ್ದಾರೆ.