ಅಪಘಾತ; ಚಾಲಕನಿಗೆ ಸಜೆ
ಕುಣಿಗಲ್: ಅತಿವೇಗ ಹಾಗೂ ಅಜಾಗರೂ ಕತೆಯಿಂದ ವಾಹನ ಚಾಲನೆ ಮಾಡಿ ಬೈಕ್ ಸವಾರನ ಸಾವಿಗೆ ಕಾರಣನಾದ ಚಾಲಕನಿಗೆ ಕುಣಿಗಲ್ನ್ಯಾಯಾಧೀಶರು ರು. 4,000 ಸಾವಿರ ದಂಡ ಮತ್ತು 6 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
19-10-2009ರಂದು ರಾಷ್ರೀಯ ಹೆದ್ದಾರಿ 48ರ ಚನ್ನತಿಮ್ಮನಪಾಳ್ಯದ ಬಳಿ ಬಾಲಾಜಿ ಎಂಬಾತ ಟಾಟಾಸುಮೋ ಅತಿ ವೇಗ ಅಜಾಗರುಕತೆಯಿಂದ ಚಾಲನೆ ಮಾಡಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ, ಹಿಂಬದಿ ಸವಾರ ಗಂಗಾಧರಯ್ಯ ಮೃತ ಪಟ್ಟಿದ್ದರು.ಪ್ರಕರಣಕ್ಕೆ ಸಂಬಂಧಿಸಿ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ, ಅಂದಿನ ವೃತ್ತ ನಿರೀಕ್ಷಕ ಬಿ.ಕೆ. ಶೇಖರ್, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಎಪಿಪಿ ವೆಂಕಟಲಕ್ಷಮ್ಮ ವಾದ ಮಂಡಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಣಿ, ಚಾಲಕ ಬಾಲಾಜಿಗೆ ನಾಲ್ಕುಸಾವಿರ ದಂಡ, ಆರು ತಿಂಗಳ ಸಜೆ ಮತ್ತು ಒಂದು ಸಾವಿರ ರು.ಗಳನ್ನು ಅಪಘಾತದಲ್ಲಿ ಗಾಯಗೊಂಡ ರಮೇಶ್ಗೆ ನೀಡಬೇಕೆಂದು ಆದೇಶಿಸಿ, ತೀರ್ಪು ನೀಡಿದ್ದಾರೆ.