ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಭಿನಂದನಾ ಸಮಾರಂಭ

Rashmi Kasaragodu
Updated On : 28 Mar 2014, 2:17 am

ಗುಬ್ಬಿ: ಪಟ್ಟಣದ ತಾಪಂ ಆವರಣದಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ಗ್ರಾಮೀಣ ಜೀವ ವಿಮಾ ನಿಗಮದಿಂದ ಏರ್ಪಡಿಸಿದ್ದ 2013-14ನೇ ಸಾಲಿನ ಜಿಡಿಎಸ್ ನೌಕರರಿಗೆ ಅಭಿನಂದನಾ ಸಮಾರಂಭದಲ್ಲಿ ತುಮಕೂರು ಅಂಚೆ ವಿಭಾಗದ ಮುಖ್ಯಸ್ಥ ಮಂಜುನಾಥ್, ಅಂಚೆ ಅಧೀಕ್ಷಕ ಎಲ್. ಮಂಜುನಾಥ್, ಅಂಚೆ ನಿರೀಕ್ಷಕ ಗಜೇಂದ್ರ ಇದ್ದರು. ಕೂಲಿ ಕೆಲಸ ಮಾಡುವವರು ಸಣ್ಣಸಣ್ಣ ಪ್ರಮಾಣದಲ್ಲಿ ನಿಮ್ಮ ಗ್ರಾಮದಲ್ಲಿಯೇ ಇರುವ ಅಂಚೆ ಕಚೇರಿಯಲ್ಲಿ ಜೀವವಿಮೆ ಮಾಡಿಸಿ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದು ತುಮಕೂರು ಜಿಲ್ಲಾ ಅಂಚೆ ಅಧೀಕ್ಷಕ ಎಲ್. ಮಂಜುನಾಥ್ ತಿಳಿಸಿದರು. ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಜೀವ ವಿಮಾ ಕ್ಷೇತ್ರದಲ್ಲಿ ಗಣನಿಯ ಸದಸ್ಯರು ಹೊಂದುತ್ತಿದ್ದು ಇಂದು ಗ್ರಾಮೀಣ ಪ್ರದೇಶದ ಜನರು ಅಂಚೆ ಇಲಾಖೆಯ ಜೀವ ವಿಮೆ ಹೆಚ್ಚಿನ ಒತ್ತು ನೀಡುತ್ತಿದೆ. ತಾಲೂಕಿನಲ್ಲಿ 1,500 ಕ್ಕೂ ಅಧಿಕ ಪಾಲಿಸಿದಾರರನ್ನು ಹೊಂದಿದೆ ಎಂದರು. ಅಂಚೆ ನಿರೀಕ್ಷಕ ಗಜೇಂದ್ರ, ಉಪ ಅಧೀಕ್ಷಕ ಬಿ.ಕೆ. ಶ್ರೀನಿವಾಸ್, ತಾಲೂಕಿನ ಅಂಚೆ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement