ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಳಪೆ ಕಾಮಗಾರಿ ಆರೋಪ;ಲೋಕಾಯುಕ್ತರಿಗೆ ದೂರು

Rashmi Kasaragodu
Updated On : 28 Mar 2014, 2:16 am

ಪಾವಗಡ: ಸಮಾಜ ಕಲ್ಯಾಣ ಇಲಾಖೆ ಶೇ.22.7ರ ಯೋಜನೆ ಅನುದಾನದಲ್ಲಿ ಕೈಗೊಂಡ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ತಾಲೂಕಿನ ಕಡಮಲಕುಂಟೆ ಎಸ್ಸಿ ಕಾಲೋನಿಯ ಸಾರ್ವಜನಿಕರು ಜಿಲ್ಲಾ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಕಳೆದ 2010,11ರಲ್ಲಿ ತಾಲೂಕಿನಲ್ಲಿ ನಿರ್ವಹಿಸಿದ್ದ ಸುಮಾರು ರು. 14ಕೋಟಿ ವೆಚ್ಚದ ಖಾತ್ರಿ ಯೋಜನೆಯ ಕಾಮಗಾರಿಗಳು ಕಳಪೆ ಆಗಿವೆ ಎಂದು ಆರೋಪಿಸಿ ಸಲ್ಲಿಸಿದ್ದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ತಾಲೂಕಿಗೆ ಭೇಟಿ ನೀಡಿ ಖಾತ್ರಿ ಯೋಜನೆಯ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಖಾತ್ರಿ ಯೋಜನೆಯ ಕಾಮಗಾರಿಯೊಂದರ ಪರಿಶೀಲನೆಗಾಗಿ ಕಡಮಲಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಯೋಜನೆಯ ರಸ್ತೆ ಕಾಮಗಾರಿ ಪರಿಶೀಲಿಸುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಳಿ ಆಗಮಿಸಿದ ಗ್ರಾಮದ ಎಸ್ಸಿ ಕಾಲೋನಿಯ ಸಾರ್ವಜನಿಕರು ಪ್ರಸ್ತುತ 10ಲಕ್ಷ ವೆಚ್ಚದಲ್ಲಿ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಿ ಪರಿಶೀಲನೆಗೆ ಒತ್ತಾಯಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಚರಂಡಿಗಳ ನಿರ್ಮಾಣ ಮತ್ತು ಸಿಸಿ ರಸ್ತೆಗಳ ನಿರ್ಮಾಣದಲ್ಲಿ ಕಳಪೆ ಆಗಿದೆ ಎಂದು ಗ್ರಾಪಂ ಸದಸ್ಯ ರಾಮಾಂಜಿನಪ್ಪ, ನಾರಾಯಣಪ್ಪ,ಧರ್ಮಪಾಲ್ಯಾದವ್ ಇತರರು ಆರೋಪಿಸಿದರು.
ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದ ಲೋಕಾಯುಕ್ತ ಅಧಿಕಾರಿಗಳು ಕಾಮಗಾರಿಯ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಾಯುಕ್ತ ಅಧಿಕಾರಿಗಳು ಸೇರಿದಂತೆ ತಾಪಂ ಇಒ ತಿಪ್ಪೇಸ್ವಾಮಿ, ಜಲಾನಯನ ಇಲಾಖೆಯ ಅಭಿವೃದ್ಧಿ ಅಧಿಕಾರಿ ಪುಟ್ಟರಂಗಪ್ಪ, ಜಿಪಂ ಎಂಜಿನಿಯರ್ ದೇಶಪಾಂಡೆ ಇತರೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement