ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಂಗ್ರೆಸ್ ಪ್ರಣಾಳಿಕೆ ಹಗಲುಗನಸು: ಜೆಡಿಯು ಆರೋಪ

Rashmi Kasaragodu
Updated On : 28 Mar 2014, 2:08 am

ತುಮಕೂರು: ಕಳೆದ ಎರಡು ಅವಧಿಯಿಂದ ಪ್ರಣಾಳಿಕೆಗಳಲ್ಲಿ ಹೇಳಿಕೊಂಡೇ ಬಂದ ಆಶ್ವಾಸನೆಗಳಿಗೆ ಹೊಸಬಣ್ಣ ಬಳಿದು ಮತ್ತೆ ಮೂರನೇ ಅವಧಿಗಾಗಿ ಜನರ ಮುಂದೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕೇವಲ ಹಗಲುಗನಸಾಗಿದೆ ಎಂದು ಜೆಡಿಯು ಅಭ್ಯರ್ಥಿ ಡಾ ಇಂತಿಯಾಜ್ ಅಹಮದ್ ಆರೋಪಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾತನಾಡಿ, ಕಾರ್ಮಿಕರಿಗೆ ವಿಮೆ ಮತ್ತು ನಿವೃತ್ತಿ ವೇತನದ ಜೊತೆ ಅಸಂಘಟಿತ ಕಾರ್ಮಿಕರೆಲ್ಲರಿಗೂ ಸಾಮಾಜಿಕ ಸುರಕ್ಷತೆ ಒದಗಿಸುವುದಾಗಿ ಪ್ರಕಟಿಸಿರುವ ಕಾಂಗ್ರೆಸ್ಗೆ ಕಳೆದೊಂದು ದಶಕದಿಂದ ಕಾರ್ಮಿಕರ ಕೂಗು ಕೇಳಿಸಿರಲಿಲ್ಲವೇ ಮಹಿಳಾ ಮಸೂದೆಯನ್ನು ಜಾರಿಗೆ ತಂದೇ ತರುತ್ತೇವೆಂದು ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲೇ ಹೇಳಿದ್ದ ಇದೇ ಕಾಂಗ್ರೆಸ್ ಈಗ ಆದ್ಯತೆ ಮೇಲೆ ಮಸೂದೆ ಜಾರಿ ಮಾಡುವುದಾಗಿ ನುಣುಚಿಕೊಳ್ಳುತ್ತಿದೆ ಎಂದರು. ಸ್ವಾತಂತ್ರ್ಯಾನಂತರದಿಂದ ಇಲ್ಲಿಯವರೆಗೆ ಅಲ್ಪಸಂಖ್ಯಾತರ ಮತದಾರರನ್ನು ತನ್ನ ಓಟ್ ಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್, ಅದನ್ನು ಮುಂದುವರೆಸಲು ಮತೀಯ ಮತ್ತು ದುರುದ್ದೇಶ ಪೂರಿತ ಹಿಂಸೆ ನಿಯಂತ್ರಣ ಕಾಯ್ದೆ ಜಾರಿ, ಮೌಲಾನ ಆಜಾದ್ ಶಿಕ್ಷಣ ಅನುದಾನ ಮಾದರಿಯಲ್ಲಿ ಉದ್ಯಮಶೀಲರಿಗಾಗಿ ಕಾಪುನಿಧಿ ಸ್ಥಾಪನೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ತರಲು ನಿರ್ಧರಿಸಿದೆ. ಅದು ಎಷ್ಟರ ಮಟ್ಟಿಗೆ ಸಾಕಾರವಾಗಲಿದೆ ಎಂಬುದು ಪ್ರಶ್ನಾರ್ಹ ಎಂದಿದ್ದಾರೆ.
ನಿರುದ್ಯೋಗಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ವಿದೇಶಿ ಬಂಡವಾಳದಾರರ ಬರುವಿಕೆಗೆ ರತ್ನಗಂಬಳಿ ಹಾಸಿ, ಅದನ್ನು ಮರೆಮಾಚಲು ಉದ್ಯೋಗ ಸೃಷ್ಟಿಯ ವಿಚಾರ ತಂದು ದೇಶದ ಜನತೆಯ ಕಣ್ಣೊರೆಸುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement