ತಾಲೂಕಿನಲ್ಲಿ ಪ್ರತಾಪ್ ಸಿಂಹ ಪ್ರಚಾರ ಇಂದು
ಹುಣಸೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮಾ.28ರ ಶುಕ್ರವಾರ ತಾಲೂಕಿನಲ್ಲಿ ಹಲವಾರು ಗ್ರಾಪಂ ಕೇಂದ್ರಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸುವರು. ಅಂದು ಬೆಳಗ್ಗೆ 9ಕ್ಕೆ ಬನ್ನಿಕುಪ್ಪೆ, 10ಕ್ಕೆ ಬೀಜಗನಹಳ್ಳಿ, 11ಕ್ಕೆ ಕೆಬ್ಬೆಕೊಪ್ಪಲು, 12ಕ್ಕೆ ಮೂಕನಹಳ್ಳಿ, ಮಧ್ಯಾಹ್ನ ಒಂದಕ್ಕೆ ಹಳೇಬೀಡು, 3ಕ್ಕೆ ಮನುಗನಹಳ್ಳಿ ಹಾಗೂ ಹಂದನಹಳ್ಳಿ, 4ಕ್ಕೆ ಬಿಳಿಕೆರೆಯಲ್ಲಿ ರೋಡ್ ಶೋ, 5ಕ್ಕೆ ಗಾಗೇನಹಳ್ಳಿ, 6ಕ್ಕೆ ಚೆಲ್ಲಹಳ್ಳಿ ಹಾಗೂ 7ಕ್ಕೆ ಉದ್ದೂರುಕಾವಲ್ ಗ್ರಾಪಂಗಳಿಗೆ ಭೇಟಿ ನೀಡುವರು.