ಪಾವಗಡ: 246 ಮತಗಟ್ಟೆ ಸ್ಥಾಪನೆ
ಪಾವಗಡ: ಏ.17ರಂದು ನಡೆಯುವ ಚಿತ್ರದುರ್ಗ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನಲ್ಲಿ 246 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕೃಷ್ಣಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮತಾನಾಡಿ, ತಾಲೂಕಿನಲ್ಲಿ 246ಮತಗಟ್ಟೆ ಸ್ಥಾಲಾಗಿದ್ದು, ಇದರಲ್ಲಿ 38 ಅತಿಸೂಕ್ಷ್ಮ, 42 ಸೂಕ್ಷ್ಮ ಮತ್ತು 166 ಸಾಮಾನ್ಯ ಮತಗಟ್ಟೆಗಳೆಂದು ಗುರ್ತಿಸಲಾಗಿದೆ ಎಂದರು.
ತಾಲೂಕಿನಲ್ಲಿ ಒಟ್ಟು ಮತದಾರರ ಸಂಖ್ಯೆ 1,89,354ಇದ್ದು 96,830, ಪುರುಷರು ಮತ್ತು 92,524 ಮಹಿಳಾ ಮತದಾರರಿದ್ದಾರೆ. 2,758 ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು ಅವರಿಗೆ ಗುರ್ತಿನ ಚೀಟಿ ನೀಡಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ತಾಲೂಕಿನ 4ಕಡೆ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಪ್ರತಿ ಚೆಕ್ಪೋಸ್ಟ್ಗೆ ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ವಿಡಿಯೋ ಗ್ರಾಫರ್ ಸೇರಿದಂತೆ ಅಧಿಕಾರಿಗಳ ತನಿಖಾ ತಂಡ ರಚಿಸಲಾಗಿದೆ ಎಂದರು. ತಹಸೀಲ್ದಾರ್ ಮಹಮ್ಮದ್ ಅಲ್ತಾಪ್ ಸೇರಿದಂತೆ ಅಧಿಕಾರಿಗಳಾದ ಮುನ್ಸಿಬಸಯ್ಯ, ರಾಮಮೂರ್ತಿ, ಇಮಾನ್ಖಾನ್ ಹಾಗೂ ರಾಜ್ಗೋಪಾಲ್ ಇದ್ದರು.