ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮುಕ್ತ ಚುನಾವಣೆಗಾಗಿ ಸಿದ್ಧತೆ: ಅನೂಪ್

Rashmi Kasaragodu
Updated On : 28 Mar 2014, 2:08 am

ಕುಣಿಗಲ್: ಚುನಾವಣೆಗಳನ್ನು ಮುಕ್ತವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಅನೂಪ್ ತಿಳಿಸಿದ್ದಾರೆ.
ಒಟ್ಟು 1,73,792 ಮತದಾರರಿದ್ದು 87,780 ಪುರುಷರು, 85,998 ಮಹಿಳೆಯರು ಹಾಗೂ ಇತರೆ 14 ಮಂದಿ ಮತದಾರರಿದ್ದು, 263 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಈ ಪೈಕಿ 39 ಅತಿಸೂಕ್ಷ್ಮ, 39 ಸೂಕ್ಷ್ಮ, 185 ಸಾಮಾನ್ಯ ಮತಗಟ್ಟೆಗಳಾಗಿವೆ. 1,032 ಮತಗಟ್ಟೆ ಸಿಬ್ಬಂದಿಯನ್ನು 210 ಮೀಸಲು ಸಿಬ್ಬಂದಿ ನಿಯೋಜಿಸಿದ್ದು, ಸಿಬ್ಬಂದಿಗೆ ಸೂಕ್ತ ತರಬೇತಿ ಡಲಾಗಿದೆ. ಚುನಾವಣೆ ಘೋಷಣೆಯಾದ ಸಮಯಕ್ಕೆ ತಹಸೀಲ್ದಾರ್ ವಯೋನಿವೃತ್ತಿ ಹೊಂದಿದ ಕಾರಣ ಕೆಲ ತಾಂತ್ರಿಕ ತೊಡಕುಗಳು ಎದುರಾಗುತ್ತಿದ್ದು, ತಹಸೀಲ್ದಾರ್ ನಿಯೋಜನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಗತ್ಯ ತಂಡಗಳನ್ನು ರಚಿಸಲಾಗಿದ್ದು, ಚುನಾವಣೆಗೆ ಸಂಬಂಧಿಸಿ ದೂರು ನೀಡಲು ತಾಲೂಕು ಕಚೇರಿ ಆವರಣದಲ್ಲಿ ದಿನದ 24 ತಾಸು ಕಾರ್ಯ ನಿರ್ವಹಿಸುವ ಸಹಾಯವಾಣಿ ಪ್ರಾರಂಭಿಸಲಾಗಿದೆ. ದೂ-08132-220239, 08132-220139 ಅಗಿದ್ದು ಸಾರ್ವಜನಿಕರು ಸಂಪರ್ಕಿಸಿ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement