ಶ್ರೀಗಳ ಆಶೀರ್ವಾದ ಪಡೆದ ನಿಲೇಕಣಿ
ತುಮಕೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಸಿದ್ದಗಂಗಾ ಮಠಕ್ಕೆ ಗುರುವಾರ ಬೆಳಗ್ಗೆ 7.45 ಕ್ಕೆ ಆಗಮಿಸಿ, ಸಿದ್ದಗಂಗಾ ಮಠದ ಹಿರಿ-ಕಿರಿಯ ಶ್ರೀಗಳಿಬ್ಬರ ಆಶೀರ್ವಾದ ಪಡೆದರು. ಮಠದಲ್ಲಿ ಉಪಹಾರ ಸೇವಿಸಿದ ಕಣಿ, ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಮಠದಲ್ಲಿದ್ದರು.