ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

124 ಆರೋಪಿಗಳ ಹಾಜರಿ: ಮುಚ್ಚಳಿಕೆ ಪತ್ರ

Rashmi Kasaragodu
Updated On : 29 Mar 2014, 2:04 am

ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಲಯ ವ್ಯಾಪ್ತಿಗಳಲ್ಲಿ ಈ ಹಿಂದೆ ಅಬಕಾರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಳೆಯ ಆರೋಪಿಗಳನ್ನು ಸದ್ವರ್ತನೆಗಾಗಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲು ಈ ಕೆಳಕಂಡಂತೆ  ತಾಲೂಕು ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಲಾಗಿದೆ. ಸದ್ವರ್ತನೆಗಾಗಿ ಹಾಗೂ ಮುಂದೆ ಯಾವುದೇ ರೀತಿಯ ಅಬಕಾರಿ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಮೂನೆ ಸಂಖ್ಯೆ 13 ಸದ್ವರ್ತನೆಗಾಗಿ ಮುಚ್ಚಳಿಕೆ ಪತ್ರ ಪಡೆಯಲು ಅಪರಾಧ ದಂಡ ಪ್ರಕ್ರಿಯೆ ಸೆಕ್ಷನ್ 110 ರ ಪ್ರಕಾರ ಆಯಾ ವಲಯ ವ್ಯಾಪ್ತಿಯಲ್ಲಿನ ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳ ಮುಂದೆ ಇಲ್ಲಿಯವರೆಗೆ ಒಟ್ಟು 124 ಆರೋಪಿಗಳನ್ನು ಹಾಜರುಪಡಿಸಿ, ಮುಚ್ಚಳಿಕೆ ಪತ್ರವನ್ನು ಪಡೆಯಲಾಗಿದೆ ಎಂದು ಅಬಕಾರಿ ಉಪಆಯುಕ್ತರು ತಿಳಿಸಿದ್ದಾರೆ. ತುಮಕೂರು ತಾಲೂಕಿನ ತಹಸೀಲ್ದಾರ್ ಅವರ ಮುಂದೆ 11 ಆರೋಪಿಗಳು, ಮಧುಗಿರಿ 38, ಕುಣಿಗಲ್ 3, ಗುಬ್ಬಿ 8, ಶಿರಾ 22, ಪಾವಗಡ 38, ಕೊರಟಗೆರೆ ತಾಲೂಕಿನ ತಹಸೀಲ್ದಾರ್ ಅವರ ಮುಂದೆ 4 ಆರೋಪಿಗಳನ್ನು ಹಾಜರುಪಡಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement